ಯುಎಸ್ ಓಪನ್ : ನವೋಮಿ ಒಸಾಕಾಗೆ 3ನೇ ಬಾರಿ ಗ್ರ್ಯಾನ್ ಸ್ಲ್ಯಾಮ್ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.13-ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‍ನ ರೋಚಕ ಫೈನಲ್ ಹಣಾಹಣಿಯಲ್ಲಿ ಜಪಾನ್‍ನ ನವೋಮಿ ಒಸಾಸ ವಿಜೇತರಾಗಿದ್ದಾರೆ.

ಈ ಮೂಲಕ 30 ದಶಲಕ್ಷ ಡಾಲರ್ ನಗದು ಮತ್ತು ಪ್ರಶಸ್ತಿ ಫಲಕವನ್ನು ಗಳಿಸಿದ್ದಾರೆ.  ಬೆಲಾರಸ್‍ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸುವ ಮೂಲಕ ನವೋಮಿ ಮೂರನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿದ್ದಾರೆ.

ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ಅರ್ಥರ್ ಆಶೆ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ 1 ಗಂಟೆ 53 ನಿಮಿಷಗಳ ಅಂತಿಮ ಹೋರಾಟದಲ್ಲಿ ನವೋಮಿ ಒಸಾಕಾ ಅವರು ವಿಕ್ಟೋರಿಯಾ ಅಜರೆಂಕಾ ಅವರನ್ನು 1-6, 6-3, 6-3 ಸೆಟ್‍ಗಳಿಂದ ಮಣಿಸಿ ಯುಎಸ್ ಓಪನ್ ಪಶಸ್ತಿ ಗೆದ್ದುಕೊಂಡರು.

1994ರ ಬಳಿಕ ಯುಎಸ್ ಓಪನ್ ಸಿಂಗಲ್ಸ್‍ನ ಅಂತಿಮ ಪಂದ್ಯವನ್ನು ಗೆದ್ದ ಏಷ್ಯಾದ ಚಮಹಿಳೆ ಎಂಬ ಹೆಗ್ಗಳಿಕೆಗೆ ಜಪಾನ್ ಟೆನಿಸ್ ತಾರೆ ಪಾತ್ರರಾಗಿದ್ದಾರೆ. ಮೂರನೇ ಬಾರಿ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ವಿಶ್ವ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ನವೋಮಿ ಮೂರನೇ ಸ್ಥಾನಕ್ಕೇರಿದ್ದಾರೆ.

ಅಲ್ಲದೇ ಚೀನಾದ ಲೀನಾ ಅವರ ಎರಡು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ದಾಖಲೆಯನ್ನು ಹಿಂದಕ್ಕೆ ತಳ್ಳಿ ಮೂರು ಬಾರಿ ಪ್ರತಿಷ್ಠಿತ ಟೈಟಲ್ ಗೆದ್ದುಕೊಂಡು ಏಷ್ಯಾ ಖಂಡ ಪ್ರಥಮ ಮಹಿಳೆ ಎಂಬ ಹೆಗ್ಗಳಿಕಗೆ ನವೋಮಿ ಪಾತ್ರರಾಗಿದ್ದಾರೆ.
ಒಸಾಕಾ ಈ ಹಿಂದೆ 2018ರಲ್ಲಿ ಅಮೆರಿಕ ಓಪನ್ ಮತ್ತು 2019ರ್ಲಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.

ಒಸಾಕಾ ಪ್ರತಿಕ್ರಿಯೆ : ಮೂರನೇ ಬಾರಿ ಗ್ರ್ಯಾನ್ಸ್ ಸ್ಲಾಮ್ ಪ್ರಶಸ್ತಿ ಗೆಲ್ಲುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ಈ ಪಂದ್ಯ ನನಗೆ ತುಂಬಾ ಕಠಿಣ ಸವಾಲಾಗಿತ್ತು. ವಿಕ್ಟೋರಿಯಾ ಅಜರೆಂಕಾ ಅವರಿಂದ ನಾನು ಭಾರೀ ಪೈಪೋಟಿಯನ್ನು ಎದುರಿಸಿ ಪ್ರಯಾಸದಿಂದ ಈ ಗೆಲುವು ಸಾದಿಸಿದೆ ಎಂದು ಒಸಾಕಾ ಪ್ರತಿಕ್ರಿಯಿಸಿದ್ದಾರೆ.

ಅಜರೆಂಕಾ ಅವರು ಫೈನಲ್ ಹಣಾಹಣಿಯ ಮೊದಲ ಸೆಟ್‍ನಲ್ಲಿ ಪ್ರಾಬಲ್ಯ ಸಾಧಿಸಿ ಮುಂಚೂಣಿಯಲ್ಲಿದ್ದರು. ನಂತರ ಕಠಿಣ ಸವಾಲು ಎದುರಿಸಿ ನಾನು ಜಯ ಸಾಧಿಸಿದೆ ಎಂದು ಓಸಾಕಾ ಹೇಳಿದ್ದಾರೆ.  ಎರಡು ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿರುವ ಬೈಲೋರಷ್ಯಾದ ವಿಕ್ಟೋರಿಯಾ ಅಜರೆಂಕಾ ಈ ಫೈನಲ್ ಪಂದ್ಯ ಅತ್ಯಂತ ಪೈಪೋಟಿಯದ್ದಾಗಿತ್ತು.

2013ರಲ್ಲಿ ಯುಎಸ್ ಓಪನ್ ಟೂರ್ನಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಜೊತೆ ಸೆಣಿಸಿದ ನಂತರ ನಾನು ಭಾರೀ ಸವಾಲನ್ನು ಈ ಹಣಾಹಣಿಯಲ್ಲಿ ಎದುರಿಸಬೇಕಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

Facebook Comments