ಕ್ವಾರ್ಟರ್ ಫೈನಲ್ ತಲುಪಿದ ಬೋಪಣ್ಣ-ಡೆನ್ನಿಸ್ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.6- ಗಗನ ಚುಂಬಿ ನಗರಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್‍ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನ್ನಿಸ್ ಶಪೊವಲೊವ್ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ನಿನ್ನೆ ರಾತ್ರಿ ನಡೆದ ಭಾರೀ ಹಣಾಹಣಿಯಲ್ಲಿ ಬೋಪಣ್ಣ- ಡೆನ್ನಿಸ್ ಜರ್ಮನಿಯ 6ನೇ ಶ್ರೇಯಾಂಕದ ಕೆವಿನ್ ಕ್ರಾವೀಟ್ಜ್ ಮತ್ತು ಅಂಡ್ರಿಯಾಸ್ ಮೀಸ್ ಜೋಡಿಯನ್ನು ಪ್ರಬಲ ಹೋರಾಟದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದೆ.

ಒಂದು ಗಂಟೆ 47 ನಿಮಿಷಗಳ ಕಾಲ ನಡೆದ ತೀವ್ರ ಹಣಾಹಣಿಯ 2ನೇ ಸುತ್ತಿನ ಮುಖಾಮುಖಿಯಲ್ಲಿ ಭಾರತ-ಕೆನಡಾ ಜೋಡಿ ಜರ್ಮನಿಯ ಬಲಿಷ್ಠ ಆಟಗಾರರನ್ನು 4-6, 6-4, 6-3 ಸೆಟ್‍ಗಳಿಂದ ಮಣಿಸಿ ಮುಂದಿನ ಹಂತ ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್‍ನಲ್ಲಿ ಬೋಪಣ್ಣ ಮತ್ತು ಡೆನ್ನಿಸ್ ಪ್ರಬಲ ಜೋಡಿಯಾದ ಜೀಲ್ ಜೂನಿಯಸ್ ರೋಜರ್ ಮತ್ತು ಹೊರೊಯಾ ಟಿಕಾವೊ ಅವರನ್ನು ಎದುರಿಸಲಿದ್ದಾರೆ.

Facebook Comments