ಟ್ರಂಪ್‍ ಆಪ್ತಮಿತ್ರನಾಗಿದ್ದ ಉದ್ಯಮಿ ಕೊರೋನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಏ.14- ಕಿಲ್ಲರ್ ಕೊರೊನಾ ವಜ್ರಮುಷ್ಠಿಗೆ ಅನೇಕ ಗಣ್ಯಾತಿಗಣ್ಯರು, ಚಿತ್ರತಾರೆಯರು, ಕ್ರೀಡಾಪಟುಗಳು, ಸಂಗೀಗ ಸಾಧಕರು ಮತ್ತು ಹೆಸರಾಂತ ವೈದ್ಯರೂ ಬಲಿಯಾಗಿದ್ದಾರೆ. ಅಲ್ಲದೇ ಹಲವಾರು ಖಾತ್ಯನಾಮರೂ ಸೋಂಕಿಗೆ ಒಳಗಾಗಿದ್ದು, ಸಂಕಷ್ಟದಲ್ಲಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತಮಿತ್ರ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸ್ಟ್ಯಾನಿ ಜೇರಾ (78) ಅವರನ್ನು ಕೋವಿಡ್-19 ಬಲಿ ತೆಗೆದುಕೊಂಡಿದೆ. ಇವರು ಗಗನಚುಂಬಿ ನಗರಿ ನ್ಯೂಯಾರ್ಕ್ ಸಿಟಿ ರಿಯಲ್ ಎಸ್ಟೇಟ್ ಡೆವಲಪರ್ ಆಗಿ ಪ್ರಸಿದ್ಧರಾಗಿದ್ದರು.

ಇವರು ಟ್ರಂಪ್‍ಗೆ ಪರಮಾಪ್ತರು, ಚುನಾವಣೆ ಸಂದರ್ಭದಲ್ಲಿ ಇವರು ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷದದೊಡ್ಡ ಮೊತ್ತದದೇಣಿಗೆ ನೀಡಿದ್ದರು. ಕ್ರೌನ್ ಅಕ್ಚಿಷಿಷನ್ ಸಂಸ್ಥೆಯ ಒಡೆಯರಾಗಿದ್ದ ಸ್ಟ್ಯಾನ್ಲಿ ನ್ಯೂಯಾರ್ಕ್ ಸೇರಿದಂತೆ ವಿವಿಧ ನಗರಗಳಲ್ಲಿ ಬೃಹತ್ ಮತ್ತು ಮುಗಿಲಚುಂಬಿ ಕಟ್ಟಡಗಳು ಮತ್ತು ಗೋಪುರಗಳನ್ನು ನಿರ್ಮಿಸಿದ್ದರು.

ಹಲವು ಉದ್ಯಮಗಳಲ್ಲಿ ಇವರು ಟ್ರಂಪ್ ಅಳಿಯ ಜೆರೇಡ್‍ಕುಷ್ನರ್‍ಅವರೊಂದಿಗೆ ವ್ಯವಹಾರಿಕ ಪಾಲುದಾರರಾಗಿದ್ದರು. ಕೊರೊನಾ ವೈರಾಣುವಿಗೆತಮ್ಮ ಮಿತ್ರ ಸ್ಟ್ಯಾನ್ಲಿ ಬಲಿಯಾಗಿರುವುದಕ್ಕೆಟ್ರಂಪ್ ಸಂತಾಪ ಸೂಇಸಿದ್ದಾರೆ.

Facebook Comments

Sri Raghav

Admin