ರಂಗೇರುತ್ತಿದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ : ಟ್ರಂಪ್ Vs ಬಿಡೆನ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.19-ಕೊರೊನಾ ವೈರಸ್ ಕಾಟದ ನಡುವೆಯೂ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕದ ಅಧ್ಯಕ್ಷೀಯ ಚುನಾವಣೆ ರಂಗೇರುತ್ತಿದೆ.

ಅಮೆರಿಕ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸೆಣಸಲು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರನ್ನು ಇಂದು ಡೆಮೊಕ್ರಾಟಿಕ್ ಪಕ್ಷವು ತನ್ನ ಅಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಇದರೊಂದಿಗೆ ಅಮೆರಿಕದಲ್ಲಿ ಚುನಾವಣಾ ಕಾವು ಏರತೊಡಗಿದೆ.  ನವೆಂಬರ್‍ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೆಮೊಕ್ರಾಟಿಕ್ ಪಕ್ಷದಿಂದ ಬಿಡೆನ್ ಸ್ರ್ಪಸುವುದು ಮೊದಲಿನಿಂದಲೂ ಖಚಿತವಾಗಿದ್ದು, ಒಂದು ಅವರ ಉಮೇದುವಾರಿಕೆಯನ್ನು ಪಕ್ಷವು ಅಕೃತವಾಗಿ ಘೋಷಿಸಿದೆ.

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಲು ಬಿಡೆನ್ ಎರಡು ಭಾರಿ ಯತ್ನಿಸಿ ವಿಫಲರಾಗಿದ್ದರು. ಈಗ ಅವರು ಟ್ರಂಪ್ ವಿರುದ್ಧ ಸ್ರ್ಪಸಲು ಅವಕಾಶ ಪಡೆದಿದ್ದು, ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲಕ ಪ್ರಭಾವಿ ಮಹಿಳೆ ಕಮಲಾ ದೇವಿ ಹ್ಯಾರಿಸ್ ಸ್ರ್ಪಸಿರುವುದರಿಂದ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin