ದೊಡ್ಡಣ್ಣನಿಗೇ ಶಾಕ್ ಕೊಟ್ಟ ಭಾರತ, ಅಮೆರಿಕದ 28 ಉತ್ಪನ್ನಗಳಿಗ ತೆರಿಗೆ ಹೆಚ್ಚಳ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ(ಪಿಟಿಐ), ಜೂ.16- ಭಾರತದ ಉಕ್ಕು ಮತ್ತು ಅಲ್ಯುಮಿನಿಯಂಗೆ ಭಾರೀ ತೆರಿಗೆ ಬರೆ ಎಳೆದಿರುವ ಅಮೆರಿಕಕ್ಕೆ ತಿರುಗೇಟು ನೀಡಿರುವ ಭಾರತ ಆ ದೇಶದ 28 ಉತ್ಪನ್ನಗಳ ಮೇಲೆ ಅತ್ಯಧಿಕ ತೆರಿಗೆ ಹೇರಿದೆ. ಇದರಿಂದಾಗಿ ಭಾರತ ಮತ್ತು ಅಮೆರಿಕ ನಡುವಣ ವಾಣಿಜ್ಯ ಸಮರ ಮತ್ತಷ್ಟು ಉಲ್ಬಣಗೊಂಡಂತಾಗಿದೆ.

ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಬಾದಾಮಿ, ದ್ವಿ ದಳ ಧಾನ್ಯಗಳು, ಬೇಳೆ ಕಾಳುಗಳು, ವಾಲ್‍ನಟ್‍ಗಳು ಸೇರಿದಂತೆ 28 ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆ ಅತ್ಯಧಿಕ ತೆರಿಗೆಯನ್ನು ಘೋಷಿಸಿತ್ತು.

ಅದು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಇದರಿಂದಾಗಿ ಭಾರತಕ್ಕೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ಅಮೆರಿಕದ ಕಂಪೆನಿಗಳು ಅಧಿಕ ತೆರಿಗೆ ಭರಿಸಬೇಕಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಭಾರತದ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಭಾರೀ ತೆರಿಗೆ ವಿಧಿಸಿತ್ತು.

ಇದಕ್ಕೆ ಪ್ರತಿಯಾಗಿ ಭಾರತ ವಾಷಿಂಗ್ಟನ್ ವಿರುದ್ಧ ವಾಣಿಜ್ಯ ಸಮರವನ್ನು ಮುಂದುವರೆಸಿದ್ದು , ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ತೋರುತ್ತಿಲ್ಲ.

Facebook Comments