9/11 ಸ್ಮಾರಕ ಸ್ಪೋಟಕ್ಕೆ ಸಂಚು : ಅಮೆರಿಕ ಯೋಧ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಜ.20- ವಲ್ರ್ಡ್ ಟ್ರೇಡ್ ಸೆಂಟರ್ ಸೋಟ ದುರ್ಘಟನೆ ನೆನಪಿಸುವ ಸಲುವಾಗಿ ನ್ಯೂಯಾರ್ಕ್‍ನಲ್ಲಿ ನಿರ್ಮಿಸಲಾಗಿರುವ 9/11 ಸ್ಮಾರಕ ಮತ್ತು ಮ್ಯೂಸಿಯಂ ಅನ್ನು ಸ್ಫೋಟಿಸುವ ಹಾಗೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಸೈನಿಕರ ಮೆಲೆ ದಾಳಿ ನಡೆಸಲು ಯೋಜನೆ ರೂಪಿಸಿರುವ ಬಗ್ಗೆ ಆನ್‍ಲೈನ್ ನಲ್ಲಿ ಮಾತನಾಡಿದ ಯುಎಸ್ ಸೈನಿಕನೊಬ್ಬನನ್ನು ಭಯೋತ್ಪಾದನೆ ಆರೋಪದಡಿ ಜಾರ್ಜಿಯಾದಲ್ಲಿ ಬಂಸಲಾಗಿದೆ.

ಬಂತ ಆರೋಪಿ ಓಹಿಯೋ ಸ್ಟೌನಾ ಪ್ರದೇಶದ ವಾಸಿ ಕರ್ನಲ್ ಜೇಮ್ಸ್ ಬ್ರಿಡ್ಜಸ್ ಎಂದು ತಿಳಿದುಬಂದಿದ್ದು, ಆತ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದ ಗುಂಪಿಗೆ ಮಾಹಿತಿ ರವಾಹಿಸುತ್ತಿದ್ದಲ್ಲದೆ, ಮಿಲಿಟರಿ ಸದಸ್ಯನೊಬ್ಬನ ಕೊಲೆ ಯತ್ನದ ಆರೋಪ ಆತನ ಮೇಲಿದೆ ಎಂದು ಮ್ಯಾನ್‍ಹಟ್ಟನ್ ಫೆಡರಲ್ ಪ್ಯಾಸಿಕ್ಯೂಟರ್ ವಕ್ತಾರ ನಿಕೋಲಸ್ ಬಯಾಸ್ ಹೇಳಿದ್ದಾರೆ.

20 ವರ್ಷದ ಆರೋಪಿಯನ್ನು ಜಾರ್ಜಿಯಾದ ಥರ್ಡ್ ಇನೆಂಟ್ರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತನನ್ನು ಕೋಲ್ ಗೋನ್ಜಾಲ್ಸ್ ಎಂತಲೂ ಕರೆಯುತ್ತಿದ್ದರು. ಈತ ಭಯೋತ್ಪಾದಕ ಸಂಘಟನೆಗಳೊಡನೆ ಆನ್‍ಲೈನ್‍ನಲ್ಲಿ ವ್ಯವಹರಿಸುತ್ತಿದ್ದಲ್ಲದೆ, ಅವರಿಂದ ಪ್ರೇರಿತನಾಗಿ ಈ ಭಯೋತ್ಪಾದಕ ಕೃತ್ಯಗಳ ಯೋಜನೆ ರೂಪಿಸಿದ್ದಾನೆ ಎಂದು ಬಯಾಸ್ ತಿಳಿಸಿದ್ದಾರೆ.

ಇತ್ತೀಚೆಗೆ ಆರೋಪಿ ತನ್ನ ಎರಡನೇ ಯೋಜನೆ ಬಗೆಗಿನ ವಾಯ್ಸ್ ಮ್ಯಾನಿಪುಲೇಟರ್, ಐಸಿಸ್ ಪ್ರಚಾರದ ವಿಡಿಯೋವನ್ನು ಹಾಗೂ ಯುಎಸ್ ಮಿಲಿಟರಿ ಮೇಲಿನ ದಾಳಿ ಯೋಜನೆಯನ್ನು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗೆ ಕಳುಹಿಸಿರುವ ಮಾಹಿತಿಯೂ ದೊರೆತಿದೆ ಎಂದಿದ್ದಾರೆ.

Facebook Comments

Sri Raghav

Admin