ಅಕ್ಷರಸಹ ನರಕದಂತಾದ ಅಮೇರಿಕ, 37,000 ಮಂದಿ ಸಾವು, 7 ಲಕ್ಷ ಜನರಲ್ಲಿ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.18- ಅಗೋಚರ ಪೆಡಂಭೂತ ಕೊರೊನಾ ಅಮೆರಿಕವನ್ನು ನಿರಂತರವಾಗಿ ಕಾಡುತ್ತಿದೆ. ಚೀನಾ ನಂತರ ಭಾರೀ ಸಂಖ್ಯೆ ಸಾವು ಮತ್ತು ಸೋಂಕಿನಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕದಲ್ಲಿ ಪ್ರತಿದಿನ ಸಾರಾಸಗಟಾಗಿ ಸಾಯುವವರ ಪ್ರಮಾಣ ಹೆಚ್ಚುತ್ತಲೇ ಇದೆ.

ನಿನ್ನೆ ಒಂದೇ ದಿನ 3,856 ಮಂದಿಯನ್ನು ಕೊರೊನಾ ನುಂಗಿ ಹಾಕಿದೆ. ಮೊನ್ನೆ ವಿಶ್ವ ದಾಖಲೆ ಪ್ರಮಾಣದ 4,590ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕೋವಿಡ್-19 ವೈರಸ್ ಮುಂದೆಯಾವ ಶಕ್ತಿಶಾಲಿ ದೇಶವೂ ಲೆಕ್ಕಕ್ಕಿಲ್ಲದಂತಾಗಿದೆ. ಅಮೆರಿಕಈವರೆಗೆಸುಮಾರು 37,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 7 ಲಕ್ಷಕ್ಕೂಅಧಿಕಜನರಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

ಜಾನ್ಸ್ ಹಾಪ್‍ಕಿನ್ಸ್‍ಯೂನಿವರ್ಸಿಟಿ ಬಿಡುಗಡೆ ಮಾಡಿರುವಅಧಿಕೃತ ಅಂಕಿ ಅಂಶಗಳ ಪ್ರಕಾರ, 24 ತಾಸುಗಳ ಅವಧಿಯ ಮುಕ್ತಾಯದ ವೇಳೆ (ಶುಕ್ರವಾರರಾತ್ರಿ 8 ಗಂಟೆ) 3,856 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿಒಟ್ಟಾರೆ36,773 ಮಂದಿಯನ್ನುಕೊರೊನಾ ಬಲಿ ತೆಗೆದುಕೊಂಡಿದ್ದು, 7,00,282ಜನರು ಮಾರಕ ಸೋಂಕಿನಿಂದ ನರಳುತ್ತಿದ್ದಾರೆ.

ಭಾರೀ ಕಳವಳಕಾರಿ ಸಂಗತಿಎಂದರೆ ನ್ಯೂಯಾರ್ಕ್ ನಗರವೊಂದರಲ್ಲೇಈವರೆಗೆ 17,000ಕ್ಕೂ ಹೆಚ್ಚು ಮಂದಿಯನ್ನುಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 2.50 ಲಕ್ಷಕ್ಕೇರಿದೆ. ನ್ಯೂಜೆರ್ಸಿ ನಗರದಲ್ಲೂ ಕೊರೊನಾ ಅಟ್ಟಹಾಸ ಆತಂಕಕಾರಿಯಾಗಿದೆ. ಅಲ್ಲಿಈವರೆಗೆ4,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸೋಂಕಿರತ ಸಂಖ್ಯೆ 76,000ದಾಟಿದೆ.

ಅಮೆರಿಕದಎಲ್ಲ 50 ರಾಜ್ಯಗಳು ಒಂದಿಲ್ಲೊಂದುರೀತಿಯಲ್ಲಿಕೊರೊನಾಕಂಟಕದಿಂದ ನರಳುವಂತಾಗಿದ್ದು, ಅಧ್ಯಕ್ಷಡೊನಾಲ್ಡ್‍ಟ್ರಂಪ್ ನೇತೃತ್ವದ ಸರ್ಕಾರ ಈ ಹೆಮ್ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮುಂದುವರಿಸಿದೆ.

Facebook Comments

Sri Raghav

Admin