ಭಾರತಕ್ಕೆ ಬರಲಿದೆ ಅಮೆರಿಕಾದ 8 ಕೋಟಿ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜೂ.10-ಅಮೆರಿಕಾದಲ್ಲಿ ಬಳಕೆಯಾಗದೆ ಉಳಿದಿರುವ ಎಂಟು ಕೋಟಿ ಕೊರೊನಾ ಲಸಿಕೆಗಳನ್ನು ವಿಶ್ವಸಂಸ್ಥೆಯ ಜಾಗತೀಕ ಲಸಿಕೆ ಅಭಿಯಾನ ಯೋಜನೆಯಡಿ ಭಾರತಕ್ಕೆ ಅಧ್ಯಕ್ಷ ಜೋ ಬೈಡೆನ್ ತೀರ್ಮಾನಿಸಿದ್ದಾರೆ ಎಂದು ಸ್ಟೇಟ್ ಡಿಪಾರ್ಟ್‍ಮೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಸೇರಿದಂತೆ ದಕ್ಷಿಣ, ಮತ್ತು ಆಗ್ನೇಯ ರಾಷ್ಟ್ರಗಳಿಗೆ ಅಗತ್ಯವಿರುವ ಲಸಿಕೆ ಸರಬರಾಜು ಮಾಡಲಾಗುವುದು ಎಂದು ಜೋ ಬೈಡೆನ್ ಕಳೆದ ಜೂ.2 ರಂದು ಘೋಷಣೆ ಮಾಡಿದ್ದರು. ಇದೀಗ ಭಾರತಕ್ಕೆ ಎಂಟು ಕೋಟಿ ಲಸಿಕೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ.

ಕೊವಾಕ್ಸ್ ಯೋಜನೆಯಡಿ ಭಾರತಕ್ಕೆ ಯಾವಾಗ ಎಂಟು ಕೋಟಿ ಲಸಿಕೆ ರವಾನೆಯಾಗಲಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ,ಈಗಾಗಲೆ ಭಾರತಕ್ಕೆ ಆರು ಮಿಲಿಯನ್ ಲಸಿಕೆ ಸರಬರಾಜು ಮಾಡಲಾಗಿದೆ ಎಂದು ನೆಡ್ ಪ್ರೈಸ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ಸಮ ಪ್ರಮಾಣದಲ್ಲಿ ಹಂಚಿಕೆಯಾಗಬೇಕು ಎಂಬ ಉದ್ದೇಶದಿಂದ ಕೋವ್ಯಾಕ್ಸ್ ಯೋಜನೆ ಆರಂಭಿಸಿದ್ದು, ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ಲಸಿಕೆ ಸರಬರಾಜು ಮಾಡುತ್ತಿವೆ.

ಭಾರತದಲ್ಲಿ ಕೊರೊನಾ ಎರಡಲೆ ಅಲೆ ವ್ಯಾಪಕವಾಗಿ ಹರಡಿದ್ದರಿಂದ ಆ ದೇಶ ಕೈಗೊಂಡಿರುವ ಕೊರೊನಾ ನಿರ್ಮೂಲನೆ ಹೋರಾಟದಲ್ಲಿ ಅಮೆರಿಕಾ ಕೈ ಜೋಡಿಸಿದ್ದು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.

Facebook Comments

Sri Raghav

Admin