ರಕ್ಷಣಾ ಸಚಿವೆ ನಿರ್ಮಲಾ ಅಮೆರಿಕ ಭೇಟಿ ಫಲಪ್ರದ

ಈ ಸುದ್ದಿಯನ್ನು ಶೇರ್ ಮಾಡಿ

Nirmala Sitaramanವಾಷಿಂಗ್ಟನ್, ಡಿ.8- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಐದು ದಿನಗಳ ಅಮೆರಿಕ ಪ್ರವಾಸ ಪೂರ್ಣಗೊಂಡಿದೆ. ಇವರ ಭೇಟಿ ಫಲಪ್ರದವಾಗಿದ್ದು, ಉಭಯ ದೇಶಗಳ ನಡುವಣ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಬಲಗೊಳ್ಳಲು ಇದು ಸಹಕಾರಿಯಾಗಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವರ ಐದು ದಿನಗಳ ಪ್ರವಾಸದ ವೇಳೆ ಎರಡೂ ದೇಶ ಗಳ ನಡುವೆ ಮಹತ್ವದ ರಕ್ಷಣಾ ಸಂಬಂಧಗಳು ಗಟ್ಟಿಗೊಳ್ಳು ಪುಷ್ಟಿ ದೊರೆಯಿತು.

ಹಿಂದೂ ಮಹಾ ಸಾಗರ ಪ್ರದೇಶದಲ್ಲಿ ಭಾರತೀಯ ನೌಕಾ ಸಾಮಥ್ರ್ಯಗಳ ಹೆಚ್ಚಳ. ದ್ವಿಪಕ್ಷೀಯ ರಕ್ಷಣಾ ಸಹಕಾರದಲ್ಲಿ ಭಾರತದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಅಮೆರಿಕ ಕಂಪನಿಗಳ ನೆರವು ಸೇರಿದಂತೆ ವಿವಿಧ ಸಹಕಾರ ಒಪ್ಪಂದಗಳಿಗೆ ಎರಡೂ ದೇಶಗಳು ಅಂಕಿತ ಹಾಕಿವೆ.

ಭಾರತಕ್ಕೆ ಎಫ್-16 ಯುದ್ದ ಹೆಲಿಕಾಪ್ಟರ್‍ಗಳ ಪೂರೈಕೆ ಅಥವಾ ಸಶಸ್ತ್ರ ಡ್ರೋನ್‍ಗಳ ಪೂರೈಕೆಗೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಘೋಷಣೆಗಳು ಪ್ರಕಟ ವಾಗದಿದ್ದರೂ ಭಾರತದ ಮೂರು ಪಡೆಗಳಿಗೆ ಅಗತ್ಯವಾಗಿ ಬೇಕಾಗಿರುವ ಶಸ್ತ್ರಾಸ್ತ್ರಗಳು ಮಿತ್ತು ಇತರ ಸಾಧನಗಳನ್ನು ಪೂರೈಕೆ ಸಂಬಂಧ ಉನ್ನತ ಮಟ್ಟದ ಮಾತುಕತೆ ನಡೆದಿದೆ.

ಅಮೆರಿಕ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಹಾಗೂ ಉನ್ನತಾಧಿಕಾರಿ ಗಳೊಂದಿಗೆ ಈ ಕುರಿತು ನಿರ್ಮಿಲಾ ಸೀತಾರಾಮನ್ ಅವರು ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.

Facebook Comments