ಪಾಕ್ ವಿರುದ್ಧ ಅಮೆರಿಕ ಸಂಸದರು ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಸೆ.14-ಆಫ್ಘಾನಿಸ್ತಾನ ಬೆಳವಣಿಗೆಯಲ್ಲಿ ಪಾಕಿಸ್ತಾನ ಕಳೆದ 20 ವರ್ಷಗಳಿಂದ ನಿರ್ವಹಿಸಿರುವ ಪಾತ್ರದ ಬಗ್ಗೆ ಮರು ಪರಿಶೀಲನೆ ನಡೆಸುವುದಾಗಿ ಅಮೆರಿಕಾ ಹೇಳಿದೆ.ಪಾಕಿಸ್ತಾನ ಇಬ್ಬಗೆಯ ನೀತಿ ಅನುಸರಿಸುತ್ತಿದ್ದು, ಆ ದೇಶದೊಂದಿಗಿನ ಬಾಂಧವ್ಯ ಮುಂದುವರೆಸುವ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಅಮೆರಿಕಾ ಸಂಸದರು ಮಾಡಿಕೊಂಡ ಮನವಿಗೆ ಪತ್ರಿಕ್ರಿಯಿಸಿರುವ ಸ್ಟೇಟ್ ಸೆಕ್ರೆಟರಿ ಟೋನಿ ಬ್ಲಿಂಕನ್ ಈ ಹೇಳಿಕೆ ನೀಡಿದ್ದಾರೆ.

ನ್ಯಾಟೋ ಅಲ್ಲದ ಮಿತ್ರ ರಾಷ್ಟ್ರವನ್ನಾಗಿ ಪಾಕಿಸ್ತಾನವನ್ನು ಮುಂದುವರೆಸುವುದರ ಬಗ್ಗೆಯೂ ಮರು ಚಿಂತನೆ ನಡೆಸುವಂತೆ ಬೈಡೆನ್ ಆಡಳಿತವನ್ನು ಸಂಸದರು ಒತ್ತಾಯಿಸಿದ್ದಾರೆ.ಆಫ್ಘಾನ್‍ನಲ್ಲಿದ್ದ ಸರ್ಕಾರ ದೀಢಿರ್ ಕುಸಿದು ಬೀಳಲು ಹಾಗೂ ಅಲ್ಲಿನ ಅಮೆರಿಕನ್ನರನ್ನು ತಾಯ್ನಾಡಿಗೆ ಕರೆ ತರುವಲ್ಲಿ ಎಡವಿದ ಬೈಡೆನ್ ಸರ್ಕಾರವನ್ನು ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ.

Facebook Comments