ಉಪ ಚುನಾವಣೆ ಉತ್ಪಲ್ ಪರಿಕ್ಕರ್ ಕಣಕ್ಕೆ ..?

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ,ಏ.25(ಪಿಟಿಐ)- ಗೋವಾದ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದ್ದು, ಮುಖ್ಯಮಂತ್ರಿಯಾಗಿದ್ದ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಈ ಸಂಬಂಧ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್ ತೆಂಡೂಲ್ಕರ್ ಗುರುವಾರ ಇತರೆ ಮಿಶ್ರ ಪಕ್ಷಗಳ ಜೊತೆ ಹಾಗೂ ಪಣಜಿ ಕ್ಷೇತ್ರದ ಇತರೆ ಬ್ಲಾಕ್ ಮುಖಂಡರ ಜೊತೆ ಚರ್ಚೆ ನಡೆಸಿ ಹೆಸರು ಅಂತಿಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಕಿರುಪಟ್ಟಿ ರಚಿಸಿದ್ದು, ಅದರಲ್ಲಿ ಉತ್ಪಲ್ ಪರಿಕ್ಕರ್ ಹಾಗೂ ಸಿದಾರ್ಥ್ ಕುಂಕೋಲ್ಕರ್ ಅವರ ಹೆಸರು ಮುಂಚೂಣಿಯಲಿದೆ. ಈ ಎರಡು ಹೆಸರುಗಳನ್ನು ಹೈಕಮಾಂಡ್‍ಗೆ ರವಾನಿಸುತ್ತೇವೆ. ದೆಹಲಿಯಲ್ಲಿ ಚರ್ಚೆ ಬಳಿಕ ಹೆಸರು ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಎಂಎಲ್‍ಎ ಹಾಗೂ ಮುಖ್ಯಮಂತ್ರಿಗಳ ಮನೋಹರ್ ಪರಿಕ್ಕರ್ ಅವರ ನಿಧನದಿಂದ ಪಣಿಜಿ ವಿಧಾನಸಭ ಕ್ಷೇತ್ರಕ್ಕೆ ಮೇ 19ರಂದು ಉಪಚುನಾವಣೆ ನಡೆಯಲಿದೆ.

38 ವರ್ಷದ ಉತ್ಪಲ್ ಅವರು ಸ್ನಾತಕೋತ್ತರ ಪದವೀಧರನಾಗಿದ್ದು, ಪಕ್ಷದ ಯಾವುದೇ ಜವಾಬ್ದಾರಿಯನ್ನು ತನಗೆ ವಹಿಸಿದರೂ ಅದನ್ನು ನಿಭಾಯಿಸುವುದಾಗಿ ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ