ಪೊಲೀಸ್ ಗುಂಡಿಗೆ ಪ್ರತಿಷ್ಠಿತ ಆಪಲ್ ಕಂಪನಿಯ ಸೇಲ್ಸ್ ಮ್ಯಾನೇಜರ್ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

SaApple--01
ಲಕ್ನೋ, ಸೆ.29-ದುಷ್ಕರ್ಮಿ ಎಂಬ ಸಂಶಯದಿಂದ ಉತ್ತರ ಪ್ರದೇಶ ಪೊಲೀಸರು ಪ್ರತಿಷ್ಠಿತ ಆಪಲ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಿನ್ನೆ ರಾಜಧಾನಿ ಲಕ್ನೋದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿವೇಕ್ ತಿವಾರಿಪೊಲೀಸ್ ಗುಂಡಿಗೆ ಬಲಿಯಾದ ಮಾರಾಟ ವ್ಯವಸ್ಥಾಪಕ. ನಿನ್ನೆ ರಾತ್ರಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವಿವೇಕ್ ಅವರನ್ನು ಮೋಟಾರ್ ಬೈಕ್‍ನಲ್ಲಿದ್ದ ಪೊಲೀಸರು ಅಡ್ಡಗಟ್ಟಲು ಯತ್ನಿಸಿದರು. ಆದರೆ ಅವರು ಕಾರನ್ನು ನಿಲ್ಲಿಸದೆ ವೇಗವಾಗಿ ಮುಂದುವರಿದರು.

ಕಾರನ್ನು ಹಿಂಬಾಲಿಸಿದ ಪೊಲೀಸ್ ಬೈಕ್‍ನ ಹಿಂಬದಿಯಲ್ಲಿದ್ದ ಪ್ರಶಾಂತ್ ಚೌಧರಿ ವಾಹನದ ಕಿಟಕಿಗೆ ಗುಂಡು ಹಾರಿಸಿದರು. ಅದು ಗಾಜಿನ ಕಿಟಕಿಯನ್ನು ತೂರಿ ವಿವೇಕ್‍ಗೆ ಬಡಿದು ಮೃತಪಟ್ಟರು. ಈ ಘಟನೆಯಿಂದ ಕುಪಿತಗೊಂಡ ಆಪಲ್ ಸಂಸ್ಥೆ ಅಧಿಕಾರಿಯ ಸಂಬಂಧಿಕರು ಲಕ್ನೋದ ಗೊಮ್ತಿ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಧ್ಯ ಪ್ರವೇಶಿಸಬೇಕೆಂದು ಪಟ್ಟು ಹಿಡಿದರು. ಈ ಸಂಬಂಧ ಪೊಲೀಸ್ ಅಧಿಕಾರಿ ಪ್ರಶಾಂತ್ ಚೌಧರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin