ಗೊರಕೆ ಹೊಡೆದ ತಂದೆಯನ್ನೇ ಕೊಂದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಆ. 14- ಗೊರಕೆ ಸಂಬಂಧ ನಡೆದ ಜಗಳದಲ್ಲಿ ಮಗನೇ ತಂದೆಯನ್ನು ಕೊಂದಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ನಡೆದಿದೆ.

ರಾಮ್‍ಸ್ವರೂಪ್(65) ಮಗನಿಂದಲೇ ಕೊಲೆಯಾದ ತಂದೆ. ಸೌಧ ಗ್ರಾಮದಲ್ಲಿ ರಾಮ್‍ಸ್ವರೂಪ್ ಪತ್ನಿ ಹಾಗೂ ಪುತ್ರರಾದ ನವೀನ್ ಹಾಗೂ ಮುಕೇಶ್‍ರೊಂದಿಗೆ ವಾಸವಾಗಿದ್ದರು, ತಂದೆ ನಿದ್ದೆ ಮಾಡುವಾಗ ಜೋರು ಗೊರಕೆಯಿಂದ ನಿದ್ದೆ ಹಾಳಾಗುತ್ತಿದೆ ಎಂದು ಹಿರಿಯ ಪುತ್ರ ನವೀನ್ ಹಾಗೂ ತಂದೆ ರಾಮ್ ನಡುವೆ ಆಗಾಗ ಜಗಳವಾಗುತ್ತಿತ್ತು.

ಪತ್ನಿ ಹಾಗೂ ಕಿರಿಯ ಪುತ್ರ ಮುಕೇಶ್ ನೆಂಟರ ಮನೆಗೆ ಹೋಗಿದ್ದಾಗ ಗೊರಕೆಯ ಸಂಬಂಧವಾಗಿಯೇ ನವೀನ್ ಹಾಗೂ ರಾಮ್‍ಸ್ವರೂಪ್ ನಡುವೆ ವಾಗ್ವಾದ ನಡೆದಿದೆ.

ವಾಗ್ವಾದ ಒಂದು ಹಂತದಲ್ಲಿ ವಿಕೋಪಕ್ಕೆ ಹೋಗಿ ನವೀನ್ ತನ್ನ ತಂದೆ ರಾಮ್‍ಸ್ವರೂಪ್‍ರನ್ನು ದೊಣ್ಣೆಯಿಂದ ಹೊಡೆದಿದ್ದಾನೆ, ಹೊಡೆದ ರಭಸಕ್ಕೆ ಕುಸಿದು ಬಿದ್ದ ರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತಕ್ಷಣ ನವೀನ್ ಮನೆಯಿಂದ ಪೇರಿ ಕಿತ್ತಿದ್ದಾನೆ.

ಪತ್ನಿ ಹಾಗೂ ಕಿರಿಯ ಪುತ್ರ ಮನೆಗೆ ಬಂದಾಗ ರಾಮ್ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪರಾರಿಯಾಗಿರುವ ಹಿರಿಯ ಪುತ್ರ ನವೀನ್‍ನ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin