ಉತ್ತರಾಖಂಡ್‍ ಪ್ರವಾಹದಲ್ಲಿ ಸಿಲುಕಿದ ಕನ್ನಡಿಗರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20- ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿರುವ ಹಿಮದ ನಾಡು ಉತ್ತರಾಖಂಡ್‍ನಲ್ಲಿ ಕರ್ನಾಟಕದಿಂದ ಪ್ರವಾಸಕ್ಕೆ ತೆರಳಿದ್ದ 10 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಆರ್‍ಟಿನಗರ, ಬಸವೇಶ್ವರನಗರ, ಯಲಹಂಕದ ನಾಲ್ವರು ಸೇರಿ ರಾಜ್ಯದ 10 ಮಂದಿ ಪ್ರವಾಹದಲ್ಲಿ ಸಿಲುಕೊಂಡಿದ್ದರು. ನೆರವು ಕೋರಿ ಸಹಾಯವಾಣಿಗೆ ಸಂಪರ್ಕ ಮಾಡಿದ್ದಾರೆ. ಈ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರವಾಹಪೀಡಿತ ಸ್ಥದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರಾದ ಗಂಗಾಭಟ್, ರಿತೀಶ್ ಭಟ್(ಯಲಹಂಕ), ಗಣೇಶ್(ಬಸವೇಶ್ವರನಗರ), ಅಶ್ವಥ್ ನಾರಾಯಣ್(ಆರ್‍ಟಿ ನಗರ) ಬೆಂಗಳೂರು ಮೂಲದವರಾಗಿದ್ದಾರೆ. ಬೆಂಗಳೂರಿಗರಲ್ಲದೇ ಉಡುಪಿಯ ಒಬ್ಬರು ಕೂಡ ಪ್ರವಾಹದಲ್ಲಿ ಪರದಾಡುತ್ತಿದ್ದಾರೆ.

ಉಡುಪಿ ಮೂಲದ ರೇಖಾ ಹಾಗೂ ಸಿಂಧಗಿಯ ವೈದ್ಯೆ ಡಾ.ರೇಖಾ ಮತ್ತು ಮಿಲಿಟರಿ ವೈದ್ಯ ಡಾ.ಅನಿತಾ ಪಂಪಣ್ಣನವರ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಉತ್ತರಾಖಂಡ್‍ದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಲ್ಲಿ ನಾಲ್ವರು ಬೆಂಗಳೂರಿನವರಾಗಿದ್ದು, ಅದರಲ್ಲಿ ಇಬ್ಬರು ಯಲಹಂಕ ಮೂಲದವರಾಗಿದ್ದರೆ, ಇನ್ನೊಬ್ಬರು ಬಸವೇಶ್ವರನಗರ, ಆರ್‍ನಗರದ ನಿವಾಸಿಗಳಾಗಿದ್ದಾರೆ. ನಾಲ್ವರು ಈಗ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರಾಖಂಡ್‍ನಲ್ಲಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಒಂದೆರಡು ದಿನಗಳಲ್ಲಿ ಕನ್ನಡಿಗರನ್ನು ಕರೆತರುತ್ತೇವೆ. ಮಳೆಯಿಂದ ರಸ್ತೆ ಕಡಿತವಾಗಿರುವುದರಿಂದ ಸಂಕಷ್ಟ ಎದುರಾಗಿದೆ. ಪ್ರವಾಹಪೀಡಿತ ಭಾಗಗಳಲ್ಲಿ ಸಿಲುಕಿರುವವರ ಕುಟುಂಬವನ್ನು ಸಂಪರ್ಕಿದ್ದೇವೆ ನೋಡಲ್ ಅಕಾರಿ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

Facebook Comments