ಉತ್ತರಖಂಡ್ ಹಿಮ ಸುನಾಮಿ ದುರಂತ, ನೆರವು ನೀಡಲು ಮುಂದಾದ ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಫೆ.8 (ಪಿಟಿಐ)- ಉತ್ತರಖಂಡ ಚಮೋಲಿ ಜಿಲ್ಲೆಯಲ್ಲಿ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ. ಅಗತ್ಯವಿದ್ದಲ್ಲಿ ಉತ್ತರಖಂಡದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಮತ್ತು ನೆರವು ಪ್ರಯತ್ನಗಳಿಗೆ ಕೊಡುಗೆ ನೀಡಲು ವಿಶ್ವಸಂಸ್ಥೆ ಸಿದ್ಧವಾಗಿದೆ ಎಂದು ಪ್ರಧಾನಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಜಾಗತಿಕ ಉನ್ನತ ನಾಯಕರು ಹೀಮನದಿಯ ಸ್ಫೋಟ ಮತ್ತು ಪ್ರವಾಹದಿಂದ ಉಂಟಾದ ಹಾನಿ ಹಾಗೂ ಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ನಂದಾದೇವಿ ನೀರ್ಗಲ್ಲು ಸ್ಫೋಟದಲ್ಲಿ ಜೀವ ಕಳೆದುಕೊಂಡಿದ್ದು, ಬಹಳಷ್ಟು ಜನ ಕಣ್ಮರೆಯಾಗಿರುವುದು ದುಃಖಕರ ಸಂಗತಿ.

ಹಿಮಾಲಯದ ದೌಲಿಗಂಗಾ, ರಿಷಿ ಗಂಗಾ ಮತ್ತು ಅಲಕಾನಂದ ನದಿಗಳ ಹಿಮ ಕರಗಿ ದುಪ್ಪಟ್ಟು ವೇಗದಲ್ಲಿ ಹರಿದ ಪ್ರವಾಹದಿಂದ ಈ ಘಟನೆ ಸಂಭವಿಸಿದೆ. ತಪೋವನ್-ವಿಷ್ಣುಗಢ ವಿದ್ಯುತ್ ಯೋಜನೆಯ ಹಾಗೂ ರಷಿ ಗಂಗಾ ಜಲ ವಿದ್ಯುತ್ ಯೋಜನಾಗಾರದ ಹಾಗೂ ಇತರ ಸುಮಾರು 143 ಮಂದಿ ಕಾಣೆಯಾಗಿದ್ದಾರೆ.

ಹಿಮನದಿ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಗುಟೆರೆಸ್ ಅವರ ವಕ್ತಾರ ಸ್ಟೆ ೈಫೆನ್ ಡುಜಾರಿಕ್ ಅವರು ಹೀಮನದಿ ಸ್ಫೋಟದ ನಂತರ ಭಾರತದ ಉತ್ತರಖಂಡ ರಾಜ್ಯದಲ್ಲಿ ಭೀಕರ ಪ್ರವಾಹ ಹರಿದು ಹಲವರು ಮೃತಪಟ್ಟಿದ್ದು. ಬಹಳಷ್ಟು ಮಂದಿ ನೀರಿನಲ್ಲಿ ಕಾಣೆಯಾಗಿದ್ದಾರೆ.

ಗುಟೆರೆಸ್ ಅವರು ಪ್ರಕೃತಿಯ ದುರ್ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿ, ವಿಶ್ವಸಂಸ್ಥೆ ಭಾರತ ಸರ್ಕಾರ ಬಯಸಿದ್ದಲ್ಲಿ ನೆರವಿಗೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಬರಲಿದೆ ಎಂದು ತಿಳಿಸಿದರು.

Facebook Comments