BREAKING : ನೈಟ್ರೋಜನ್ ಬಲೂನ್ ಸ್ಫೋಟ, ತಪ್ಪಿದ ಅನಾಹುತ, ಸುತ್ತೂರು ಶ್ರೀಗಳು ಪಾರು..!

ಈ ಸುದ್ದಿಯನ್ನು ಶೇರ್ ಮಾಡಿ

Sutturu--01

ಮೈಸೂರು, ಫೆ.5- ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರೆಯಲ್ಲಿ ಬಲೂನ್ ಸ್ಫೋಟಗೊಂಡು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಅಪಾಯದಿಂದ ಪಾರಾಗಿದ್ದಾರೆ.

ಜಾತ್ರೆಯ ಐದನೆ ದಿನವಾದ ಇಂದು ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟನೆ ಸಂದರ್ಭದಲ್ಲಿ ನೈಟ್ರೋಜನ್ ತುಂಬಿದ್ದ ಬಲೂನ್ ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಹೆಚ್ಚಿನ ಅನಾಹುತಗಳಾಗಿಲ್ಲ. ಯಾವುದೇ ಪ್ರಾಣಾಪಾಯವಾಗಿಲ್ಲ.

ಶ್ರೀಗಳೂ ಸೇರಿದಂತೆ ಕೆಲವರಿಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ನಡೆದಿದ್ದೇನು..? ಜಾತ್ರೆಯ ಐದನೆ ದಿನವಾದ ಇಂದು ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ನೈಟ್ರೋಜನ್ ಬಲೂನ್ ಹಾರಿಸುವ ಮೂಲಕ ಉದ್ಘಾಟನೆಯನ್ನು ಸುತ್ತೂರು ಶ್ರೀಗಳು ಮಾಡುತ್ತಿದ್ದರು.

ಈ ವೇಳೆ ಬಲೂನ್ಗೆ ಬೆಂಕಿ ತಗಲಿ, ಬಲೂನ್ ಸ್ಫೋಟಗೊಂಡಿದೆ. ಘಟನಾ ಸ್ಥಳದ ಪಕ್ಕದಲ್ಲೇ ಕುಸ್ತಿಪಟುಗಳು, ಸಾರ್ವಜನಿಕರು ಇದ್ದರು. ಅವರಲ್ಲಿ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಸುತ್ತೂರು ಶ್ರೀಗಳು ಯಾವುದೇ ಅಪಾಯವಿಲ್ಲದ ಪಾರಾಗಿದ್ದಾರೆ.

Facebook Comments

Sri Raghav

Admin