ಅಡ್ಯಾರ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನ ಅಧ್ಯಕ್ಷರಾದ ವಿ.ಶಾಂತ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನೈ , ಜ.19- ಹಿರಿಯ ಕ್ಯಾನ್ಸರ್ ತಜ್ಞರು ಹಾಗೂ ಅಡ್ಯಾರ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನ ಅಧ್ಯಕ್ಷರಾದ ವಿ.ಶಾಂತ (93) ಅವರು ನಿಧರಾಗಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಹೃದಯ ನಾಳಗಳಲ್ಲಿ ಗಂಭೀರ ಸ್ವರೂಪದ ತೊಂದರೆ ಇದ್ದುದ್ದರಿಂದ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಇಂದು ಮುಂಜಾನೆ 3.30ರ ಸುಮಾರಿಗೆ ಶಾಂತ ಅವರ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.

ಡಾ.ಕೃಷ್ಣಮೂರ್ತಿ ಅವರ ಜತೆ ಸೇರಿ ಶಾಂತ ಅವರು ಅಡ್ಯಾರ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಸ್ಥಾಪನೆ ಮಾಡಿ ಸಾವಿರಾರು ಜನರ ಜೀವ ಉಳಿಸಿದ್ದರು. ಕ್ಯಾನ್ಸರ್ ಪೀಡಿತರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಚಿಕಿತ್ಸೆ ನೀಡಿ ಜೀವ ಉಳಿಸಿದ ಹೆಗ್ಗಳಿಕೆ ಈ ಸಂಸ್ಥೆಯದಾಗಿತ್ತು.

ದೇಶದಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಡ್ಯಾರ್ ಚಿಕಿತ್ಸಾ ಕೇಂದ್ರ ಹೆಸರು ಪಡೆದಿತ್ತು. ಆಸ್ಪತ್ರೆಗೆ ದಾಖಲಾಗುವ ಕೊನೆಯ ಕ್ಷಣದವರೆಗೂ ಶಾಂತ ಅವರು ಆಸ್ಪತ್ರೆ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಅವರು ವಿಶ್ರಾಂತಿ ಪಡೆದಿರಲಿಲ್ಲ. ಇತ್ತೀಚಿನ ದಿನಗಳ ಆರೋಗ್ಯದ ಸವಾಲುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಶಾಂತ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

Facebook Comments