ಮುಂದಿನ 4 ದಿನ ಲಸಿಕೆ ಸಿಗೋದು ಡೌಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಉತ್ಪಾದನೆಗಿಂತ ಬೇಡಿಕೆ ಪ್ರಮಾಣ ಹೆಚ್ಚಾಗಿರುವ ಕಾರಣ ಮುಂದಿನ ನಾಲ್ಕು ದಿನಗಳ ಕಾಲ ಕೋವಿಡ್ -19 ಸೋಂಕಿತರಿಗೆ ಲಸಿಕೆ ಸಿಗುವುದು ಅನುಮಾನ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ ಇನ್ನಷ್ಟು ವಿಷಮವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈಗಾಗಲೇ 18 ವಷ9ದಿಂದ 44 ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಹಲವೆಡೆ ಎರಡನೇ ಡೋಸ್​ ಪಡೆಯುವವರಿಗೂ ಲಸಿಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ 3 ದಿನಗಳ ಕಾಲ ಲಸಿಕೆ ಸಿಗುವುದೇ ಅನುಮಾನ ಎನ್ನಲಾಗುತ್ತಿದೆ.

ನಿರೀಕ್ಷೆಗೂ ಮೀರಿದ ಬೇಡಿಕೆ ಏಕಾಏಕಿ ಏರಿಕೆಯಾದ ಕಾರಣ,ಸಕಾಲದಲ್ಲಿ ಲಸಿಕೆಯನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಉತ್ಪಾದನಾ ಕಂಪನಿಗಳು ಅಸಹಾಯಕತೆ ವ್ಯಕ್ಯಪಡಿಸಿವೆ.ಲಸಿಕೆ ಪೂರೈಸುವಂತೆ ತಯಾರಿಕಾ ಕಂಪನಿಗಳಿಗೆ ಸರ್ಕಾರದಿಂದ ಬೇಡಿಕೆ ಸಲ್ಲಿಸಲಾಗಿದ್ದರೂ ಕೋಟಿ ಲೆಕ್ಕದಲ್ಲಿ ಬೇಡಿಕೆ ಇಟ್ಟರೆ ಲಕ್ಷ ಲೆಕ್ಕದಲ್ಲಿ ಪೂರೈಕೆ ಆಗುತ್ತಿದೆ.

ಹೀಗಾಗಿ ಇನ್ನೂ ಮೂರು ದಿನಗಳ ಕಾಲ ಲಸಿಕೆ ಸಿಗುವುದೇ ಅನುಮಾನವಾಗಿದ್ದು, 3 ದಿನದ ಬಳಿಕ ಲಸಿಕೆ ಸಿಕ್ಕರೂ ಕೇವಲ 2ನೇ ಡೋಸ್​ ಪಡೆಯುವವರಿಗಷ್ಟೇ ಸಿಗಬಹುದೇ ವಿನಃ ಎಲ್ಲರಿಗೂ ಲಭ್ಯವಾಗುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದೇ ಇರುವುದು ಕೊರತೆಗೆ ಕಾರಣವಾಗಿದ್ದು, ಮೇ 8ರಂದು 3.5 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ಬಂದಿದೆ. ಇನ್ನು ಮೇ 14ರ ಬಳಿಕ ಲಸಿಕೆ ಪೂರೈಸುವುದಾಗಿ ಎರಡು ಲಸಿಕಾ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿವೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ಹಂಚಿಕೆ ಮಾಡಿದಷ್ಟು ವ್ಯಾಕ್ಸಿನ್ ಪೂರೈಸುವುದಾಗಿ ಕಂಪನಿಗಳು ಹೇಳುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗದೇ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ.

ಕಳೆದ ನಾಲ್ಕು ದಿನಗಳಿಂದ ರಾಜ್ಯದ ಯಾವುದೇ ಭಾಗದಲ್ಲೂ ಅಹ9ರಿಗೆ ಕೇಂದ್ರಗಳಲ್ಲಿ ಲಸಿಕೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿಮಾ9ಣವಾಗಿದೆ.ಒಂದು ಕಡೆ 45 ವಷ‌9 ಮೇಲ್ಪಟ್ಡವರಿಗೂ ಲಸಿಕೆಯ ಕೊರತೆ ಎದುರಾಗಿದೆ.

ಇತರ ನಡುವೆಯೇ 18 ರಿಂದ 44 ವಷ9ದೊಳಗಿನವರಿಗೆ ಮೇ 1 ರಿಂದ ಲಸಿಕೆ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರೂ ಲಸಿಕೆ ಅಭಾವದಿಂದ ಸದ್ಯಕ್ಕೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಎಲ್ಲ ಪ್ರಕ್ರಿಯೆ ಮುಗಿಸಿದೆ. ಆದರೆ ಭಾರತ್ ಬಯೋಟೆಕ್ ಹಾಗೂ ಸೆರಮ್ ಇನಸ್ಟಿಟ್ಯೂಟ್​ ಆಫ್ ಇಂಡಿಯಾ ಸಂಸ್ಥೆಗಳಿಂದಲೇ ಪೂರೈಕೆಯಾಗುತ್ತಿಲ್ಲ.

ಕೋಟಿ ಲೆಕ್ಕದಲ್ಲಿ ಕೇಳಿದರೆ ಕೇವಲ ಲಕ್ಷ ಡೋಸ್ ಲೆಕ್ಕದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದೀಗ ಎರಡೂ ಕಂಪನಿಗಳು ಮೇ 14ರ ನಂತರ ಲಸಿಕೆ ಪೂರೈಸುವುದಾಗಿ ಹೇಳುತ್ತಿದ್ದು, ರಾಜ್ಯ ಸರ್ಕಾರ ಕೊವಿಶೀಲ್ಡ್ ಲಸಿಕೆಯನ್ನು ಹೆಚ್ಚು ಖರೀದಿಸಲು ನಿರ್ಧರಿಸಿದೆ. ಆದರೆ, ಈ ಖರೀದಿಗೂ ಕೇಂದ್ರ ಸರ್ಕಾರದ ನಿರ್ಧಾರ ಅಡ್ಡಿಯಾಗಿದ್ದು, ಕೇಂದ್ರ ಸರ್ಕಾರ ಹಂಚಿಕೆ ಮಾಡಿದಷ್ಟೇ ಲಸಿಕೆ ಪೂರೈಸುವುದಾಗಿ ಕಂಪನಿಗಳು ಹೇಳುತ್ತಿವೆ.

ಭಾರತ್ ಬಯೋಟೆಕ್ ಇದರ ಬೆನ್ನಲ್ಲೇ ಕೊವ್ಯಾಕ್ಸಿನ್​ ಲಸಿಕೆ ಉತ್ಪಾದಕ ಸಂಸ್ಥೆ ಭಾರತ್ ಬಯೋಟೆಕ್ ಟ್ವೀಟ್ ಮಾಡಿದ್ದು, ತಮ್ಮ ಬಗ್ಗೆ ಆರೋಪ ಹೊರಿಸುತ್ತಿರುವ ರಾಜ್ಯಗಳ ಬಗ್ಗೆ ಅಸಮಾಧಾನಗೊಂಡಿದೆ. ಕೊವ್ಯಾಕ್ಸಿನ್ ಪೂರೈಕೆಯನ್ನು ಸೂಕ್ತ ರೀತಿಯಲ್ಲಿ ಮಾಡಿದ್ದೇವೆ 18 ರಾಜ್ಯಗಳಿಗೆ ಕೊವ್ಯಾಕ್ಸಿನ್ ಡೋಸ್​ ಪೂರೈಕೆ ಮಾಡಲಾಗಿದೆ. ಮೇ 10ರಂದೇ ಕೊವ್ಯಾಕ್ಸಿನ್ ಲಸಿಕೆಯನ್ನು ಇಲ್ಲಿಂದ ಕಳುಹಿಸಿಕೊಟ್ಟಿದ್ದೇವೆ. ಆದರೆ ಹಲವು ರಾಜ್ಯಗಳು ನಮ್ಮ ವಿರುದ್ದ ಆರೋಪ ಮಾಡುತ್ತಿವೆ.

ನಮ್ಮ 50 ಮಂದಿ ಸಿಬ್ಬಂದಿ ಕೊವಿಡ್​ನಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ಅದರ ನಡುವೆಯೂ ಕೇಂದ್ರ ಸರ್ಕಾರ ತಿಳಿಸಿದ ರೀತಿಯಲ್ಲೇ ಲಸಿಕೆ ಹಂಚಿಕೆ ಮಾಡಿದ್ದೇವೆ ಎಂಸು ಭಾರತ್ ಬಯೋಟೆಕ್ ಸಮರ್ಥಿಸಿಕೊಂಡಿದೆ.

Facebook Comments

Sri Raghav

Admin