ಅನುಮೋದನೆ ಸಿಕ್ಕ ಬಳಿಕ 16-17 ವರ್ಷದ ಮಕ್ಕಳಿಗೆ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20- ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ 16-17 ವರ್ಷದ ಮಕ್ಕಳಿಗೆ ಮೊದಲು ಲಸಿಕೆ ಹಾಕುವ ಸಾಧ್ಯತೆಗಳಿವೆ. ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗಾಗಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ.

ಲಸಿಕೆಗಳಿಗೆ ಭಾರತ ಸರ್ಕಾರ ಅನುಮೋದನೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು, ಯೋಜನೆಗಳನ್ನು ರೂಪಿಸಿ, ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ. ಅಲ್ಲದೆ, ಮೊದಲಿಗೆ 16-17 ವರ್ಷದ ಮಕ್ಕಳಿಗೆ ಲಸಿಕೆ ನೀಡುವಂತೆ ತಿಳಿಸಿದೆ.

ಮಕ್ಕಳಲ್ಲಿ ಹೆಚ್ಚು ವಯಸ್ಸಿನ ಮಕ್ಕಳಾದ 16-17 ವರ್ಷದ ಮಕ್ಕಳಿಗೆ ಮೊದಲಿಗೆ ಲಸಿಕೆ ನೀಡುವಂತೆ, ನಂತರ ಚಿಕ್ಕ ಮಕ್ಕಳಿಗೆ ಲಸಿಕೆ ನೀಡುವುದನ್ನು ನಾವು ಶಿಫಾರಸು ಮಾಡುತ್ತೇವೆ. ಇದಷ್ಟೇ ಅಲ್ಲದೆ, ದೀರ್ಘಾವ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೂ ಮೊದಲ ಆದ್ಯತೆ ನೀಡುವಂತೆ ತಿಳಿಸಿದ್ದೇವೆಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಆರಂಭದಲ್ಲಿ ಲಭ್ಯವಿರುವ ಡೋಸ್‍ಗಳ ಸಂಖ್ಯೆ ಸೀಮಿತವಾಗಿರು ವುದರಿಂದ, ವಯಸ್ಕರಿಗೆ ಲಸಿಕೆ ಹಾಕುವಾಗ ಅಳವಡಿಸಿಕೊಂಡ ಮಾದರಿಯನ್ನು ಅನುಸರಿಸುವುದು ಉತ್ತಮ ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೀರ್ಘಾವ ಕಾಯಿಲೆಯಿಂದ ಬಳಲುತ್ತಿರುವ ವಯಸ್ಕರು, ಹಿರಿಯ ನಾಗರೀಕರನ್ನು ಗುರ್ತಿಸಿ ಮೊದಲು ಲಸಿಕೆ ನೀಡಿದಂತೆಯೇ ಮಕ್ಕಳಿಗೆ ಲಸಿಕೆ ನೀಡುವ ವೇಳೆಯ 17 ವರ್ಷದ ಮಕ್ಕಳು ಹಾಗೂ ದೀರ್ಘಾವ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರ್ತಿಸಿ ಮೊದಲು ಲಸಿಕೆ ನೀಡಬೇಕು. ಲಸಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮೈಕ್ರೊಪ್ಲಾನ್ ಮಾಡಿಕೊಳ್ಳುವ ಅಗತ್ಯವಿದೆ.

ಈ ಯೋಜನೆಗೆ ಶಿಶುವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆರನ್ನು ಸೇರ್ಪಡೆಗೊಳಿಸಿಕೊಳ್ಳಬೇಕು. ಲಸಿಕೆಗೆ ಅನುಮೋದನೆ ಹಾಗೂ ಮಾರ್ಗಸೂಚಿಗಳು ಬಂದ ಕೂಡಲೇ ಎಂಆರ್ ವ್ಯಾಕ್ಸಿನೇಷನ್ ಅಭಿಯಾನದ ವೇಳೆ ಅನುಭವ ಹೊಂದಿದ್ದವರನ್ನು ಈ ಲಸಿಕಾ ಅಭಿಯಾನದಲ್ಲಿ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Facebook Comments