ನಾಳೆಯಿಂದ ನಿರ್ಮಾಪಕರ ಒಕ್ಕೂಟದಿಂದ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಮೇ.31-ನಾಳೆಯಿಂದ ಭಾರತೀಯ ನಿರ್ಮಾಪಕರ ಕೂಟದ ಸದಸ್ಯರಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ. ಭಾರತೀಯ ಚಿತ್ರರಂಗದ ಒಕ್ಕೂಟದ ಸಹಯೋಗದಲ್ಲಿ ನಾಳೆಯಿಂದ ಮೆಹಬೂಬಾ ಸ್ಟುಡಿಯೋದಲ್ಲಿ ದೂರದರ್ಶನ, ಡಿಜಿಟಲ್ ಕಂಟೆಂಟ್ ನಿರ್ಮಾಪಕರುಗಳಿಗೆ ಲಸಿಕೆ ಹಾಕಲಾಗುವುದು ಎಂದು ಕೂಟದ ಅಧ್ಯಕ್ಷ ಸಿದ್ದಾರ್ಥ್ ರಾಯ್ ಕಪೂರ್ ಹೇಳಿಕೆ ನೀಡಿದ್ದಾರೆ.

ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಭಾರತೀಯ ಚಿತ್ರರಂಗ ಮತ್ತೆ ತನ್ನ ಕಾರ್ಯ ಚಟುವಟಿಕೆ ಆರಂಭಿಸಲು ಸಹಕಾರಿಯಾಗುವಂತೆ ಈ ಲಸಿಕೆ ಆಂದೋಲನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin