ಲಸಿಕೆಗಾಗಿ ಮುಂದು ವರೆದ ಜನರ ಕ್ಯೂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮೇ24 ಪ್ರಾರಂಭದಲ್ಲಿ ಕೊವಿಡ್ ಲಸಿಕೆಬಹಾಕಿಸಿ ಕೊಳ್ಳಿ ಯಾವುದೆ ಅಡ್ಡಪರಿಣಾಮ ಇಲ್ಲಾ ಅಂದ್ರೂ ಹಿಂದು ಮುಂದು ನೊಡ್ತಿದ್ದ ಜನ ಇವಾಗ ಮುಂಜಾನೆಯೆ ಲಸಿಕಾ ಕೆಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ರಾಜ್ಯದ ಲ್ಲಿ ಲಸಿಕಾ ಅಭಿಯಾನ ಪ್ರಾರಂಭ ವಾದಾಗ ಆರೋಗ್ಯ ಇಲಾಖೆ ಹಾಗೂ ಸರ್ಕಾರ ಲಸಿಕೆ ಹಾಕಿಸಿ ಕೊಳ್ಳಿ ಇದರಿಂದ ಯಾವುದೆ ಅಡ್ಡ ಪರಿಣಾಮ ವಾಗುವುದಿಲ್ಲ ಸೊಂಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

ಎಂದು ಮನವಿ ಮಾಡಿದರೂ ಲಸಿಕೆ ಹಾಕಿಸಿ ಕೊಳ್ಳದ ಜನ ಇಂದು ಸೊಂಕು ಹಾಗೂ ಮೃತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಸೆರಿದಂತೆ ರಾಜ್ಯದ ಪ್ರಮುಖ ನಗರಗಳ ಲಸಿಕಾ ಕೆಂದ್ರದ ಮುಂದೆ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೆ ಮುಂಜಾನೆಯೆ ಲಸಿಕೆ ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಕೆಲವು ಕಡೆ ದಿನ ನಿತ್ಯ ನಿಂತರೂ ಲಸಿಕೆ ಸಿಗುತ್ತಿಲ್ಲ.

ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲಿ ಲಸಿಕೆ ನಿಡಲಾಗುತ್ತಿದೆ ಕೆಲವು ಲಸಿಕಾ ಕೆಂದ್ರಗಳಲ್ಲಿ ಕೊವಿಶಿಲ್ಡ್.ಕೊವ್ಯಾಕ್ಸಿನ್ ನಿಡುತ್ತಿದ್ದು ಯಾವುದೋ ಒಂದು ಸಿಕ್ಕುದ್ರೆ ಸಾಕು ಎಂದು ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.18 ರಿಂದ 44 ವರ್ಷ ಮೆಲ್ಪಟ್ಟ ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರಿ ಲಸಿಕಾ ಕೆಂದ್ರಗಳಲ್ಲಿ ಲಸಿಕೆ‌ ನಿಡಲಾಗುತ್ತಿದ್ದು ಇದರ ಜೊತೆಗೆ ಮೊದಲ ಡೊಸ್ ಪಡೆದವರು ಎರಡನೆ ಡೋಸ್ ಗಾಗಿ ಕೆಂದ್ರಗಳ ಮುಂದೆ ಸಾಲು ಗಟ್ಟಿ ನಿಲ್ಲುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಹುತೇಕ ಕಡೆ ಸರ್ಕಾರ ಲಸಿಕಾ ಕೆಂದ್ರಗಳ ವ್ಯವಸ್ಥೆ ಮಾಡಿದೆ ಜಸಾಮಾನ್ಯರು ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ‌
ಜನರು ಇವಾಗ ಎಚ್ಚೆತ್ತು ಕೊಂಡಿದ್ದು ಲಸಿಕೆ ಸಿಕ್ಕರೆ ಸಾಕು ಎಂದು ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆದು ಕೊಳ್ಳುತ್ತಿದ್ದಾರೆ.

Facebook Comments