ಶೀಘ್ರ ಲಸಿಕೆ ಸಿಗುವ ಭರವಸೆ : ನರೇಂದ್ರ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಸೋಂಕಿಗೆ ಶೀಘ್ರ ಲಸಿಕೆ ದೊರೆಯುವ ಭರವಸೆ ಕಾಣುತ್ತಿದೆ. ಇತ್ತೀಚೆಗಷ್ಟೆ ಗುಜರಾತ್, ಪೂನಾ ಮತ್ತು ತೆಲಂಗಾಣದಲ್ಲಿರುವ ಕೊರೊನಾ ಲಸಿಕಾ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದ್ದರು.

ಇದರ ಬೆನ್ನಲ್ಲೇ ಇಂದು ಕೊರೊನಾ ಲಸಿಕೆ ಉತ್ಪಾದನೆ ಮತ್ತು ತಯಾರಿಕೆಯಲ್ಲಿ ತೊಡಗಿಸಿಕೊಂಡಿ ರುವ ಮೂರು ವೈದ್ಯರ ತಂಡದ ಮುಖ್ಯಸ್ಥರೊಂದಿಗೆ ಮೋದಿ ಇಂದು ಆನ್‍ಲೈನ್ ಮೂಲಕ ಚರ್ಚಿಸಿದರು. ಈಗಾಗಲೇ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕೊರೊನಾ ಲಸಿಕೆ ಸಂಗ್ರಹಿಸಿಡಲು ಶೈತ್ಯಾಗಾರಗಳು ನಿರ್ಮಾಣಗೊಂಡಿವೆ.

ಇದರ ಬೆನ್ನಲ್ಲೇ ಮೋದಿ ಲಸಿಕೆ ತಯಾರಿಕಾ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಿರುವುದರಿಂದ ವರ್ಷಾಂತ್ಯದೊಳಗೆ ಇಲ್ಲವೆ ಜನವರಿಯಲ್ಲಿ ಸೋಂಕಿತರಿಗೆ ಲಸಿಕೆ ಸಿಗುವ ಸಾಧ್ಯತೆಗಳಿವೆ.

Facebook Comments