ಲಸಿಕೆ ನೋಂದಣಿಯನ್ನೇ ನಿಲ್ಲಿಸಿದ ರಾಜ್ಯ ಸರ್ಕಾರ: ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7- ಅಬ್ಬರದ ಪ್ರಚಾರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದಾಗಿ ಅಭಿಯಾನ ಆರಂಭಿಸಿದ ರಾಜ್ಯ ಸರ್ಕಾರ ಈಗ ನೋಂದಣಿಯನ್ನೇ ನಿಲ್ಲಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯದಲ್ಲಿ 18 ಮೇಲ್ಪಟ್ಟವರಿಗೆ ಲಸಿಕೆ ನೋಂದಣಿಯನ್ನು ನಿರಾಕರಿಸಲಾಗಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದಂತೆ ಲಸಿಕೆ ತರಿಸದೆ ಅಬ್ಬರದ ಪ್ರಚಾರ ಮಾಡಿದ ಸರ್ಕಾರ, ಈಗ ನಾಡಿದ ಜನತೆಗೆ ದ್ರೋಹ ಎಸಗಿದೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಸಾಮರ್ಥ್ಯದ ಪ್ರತೀಕವಿದು ಎಂದು ಆಕ್ರೋಶ ವ್ಯಕ್ತ ಪಡಿಸಿಲಾಗಿದೆ. ಲಸಿಕೆ ನೀಡುವಿಕೆಯಲ್ಲಿ ಬಿಜೆಪಿ ಸರ್ಕಾರದ ಅಸಮರ್ಥತೆ ಸಾಭೀತಾಗಿದೆ. ರಾಜ್ಯದಲ್ಲಿ ಲಸಿಕೆಗಳ ಸ್ಟಾಕ್ ಮುಗಿಯುತ್ತಿದೆ 45 ಮೇಲ್ಪಟ್ಟವರಿಗೆ ಮೊದಲ ಡೋಸ್ ಇನ್ನೂ ಪೂರ್ಣವಾಗಿಲ್ಲ.

ಸುಮಾರು 65 ಲಕ್ಷ ಎರಡನೇ ಡೋಸ್ ಬಾಕಿ ಇದೆ. 18 ವರ್ಷದಿಂದ 44 ವರ್ಷದೊಳಗಿವರನಂತೂ ಕೇಳಲೇಬೇಡಿ. ಅಬ್ಬರಿಸಿ ಬೊಬ್ಬಿರಿದ ಟೀಕಾ ಉತ್ಸವ ಮಕಾಡೆ ಮಲಗಿದೆ ಬಿಜೆಪಿ ಪ್ರತಿಯೊಂದರಲ್ಲೂ ಸೋತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Facebook Comments