1.2 ಶತಕೋಟಿ ಕೊರೊನಾ ಲಸಿಕೆ ತಯಾರಿಸಲು ರಷ್ಯಾದ ಅಧ್ಯಕ್ಷ ಪುಟೀನ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೊ, ಡಿ.4- ಮಾರಕ ಕೊರೊನಾ ವೈರಿಸ್‍ಗೆ ಪರಿಣಾಮಕಾರಿ ಚಿಕಿತ್ಸೆ ಎಂದು ಭಾವಿಸಲಾಗಿರುವ ಸ್ಪುಟ್ನಿಕ್ ವಿ. ಲಸಿಕೆಯನ್ನು ಮುಂದಿನ ವಾರದಿಂದ ತಯಾರಿಸಲು ರಷ್ಯಾದ ಅಧ್ಯಕ್ಷ ವಾಲ್ಡ್‍ಮೀರ್ ಪುಟೀನ್ ಆದೇಶಿಸಿದ್ದಾರೆ.  ಮಾಸ್ಕೋದ ಗಮೆಲಿಯಾದ ಸೂಕ್ಷ್ಮಾಣು ಜೀವಿ ಸಂಶೋಧನಾ ಕೇಂದ್ರದಲ್ಲಿ ಸಿದ್ದಗೊಂಡಿರುವ ಸ್ಪುಟ್ನಿಕ್ ವಿ. ಲಸಿಕೆಯನ್ನು ಖರೀದಿಸಲು ಜಗತ್ತಿನ ಹಲವಾರು ದೇಶಗಳು ಮುಂದೆ ಬಂದಿವೆ.

ಹೀಗಾಗಿ ಮೊದಲ ಹಂತದಲ್ಲಿ 1.2 ಶತಕೋಟಿ ಲಸಿಕೆಯನ್ನು ಉತ್ಪಾದಿಸಲು ಭಾರತದ ಡಾ. ರೆಡ್ಡೀಸ್ ಆ್ಯಂಡ್ ಹೆಟ್ರೋ ಸಂಸ್ಥೆ ಜೊತೆ ರಷ್ಯಾದ ಆರ್‍ಡಿಐಎಫ್ ಒಪ್ಪಂದ ಮಾಡಿಕೊಂಡಿದೆ. ಸ್ಪುಟ್ನಿಕ್ ವಿ. ಲಸಿಕೆಯನ್ನು ಸೆ. 7ರಂದು ಮೊದಲ ಹಂತದಲ್ಲಿ ಪರೀಕ್ಷೆ ಒಳಪಡಿಸಲಾಗಿತ್ತು. ಸುಮಾರು 45 ಸಾವಿರ ಮಂದಿಯ ಮೇಲೆ ನಡೆಸಲಾಗಿರುವ ಮೂರನೇ ಹಂತದ ಪರೀಕ್ಷೆಯಲ್ಲೂ ಲಸಿಕೆ ಯಶಸ್ವಿಯಾಗಿದೆ.

ಮೊದಲ ಹಂತದ ಲಸಿಕೆಯನ್ನು 22 ಸಾವಿರ ಜನರ ಮೇಲೆ ಪ್ರಯೋಜಿಸಲಾಗಿತ್ತು. ಇದು 28 ದಿನಗಳಲ್ಲಿ ಶೇ. 91.4ರಷ್ಟು ಪರಿಣಾಮಕಾರಿಯಾಗಿದ್ದು 2ನೇ ಹಂತದಲ್ಲಿ 19 ಸಾವಿರ ಜನರ ಮೇಲೆ ಲಸಿಕೆ ಪ್ರಯೋಗಿಸಿದಾಗ 42 ದಿನಗಳಲಿ ಶೇ. 95ರಷ್ಟು ರೋಗ ನಿವಾರಣೆಯಾಗುವ ಫಲಿತಾಂಶ ಬಂದಿದೆ. ಸುಮಾರು 40 ದೇಶಗಳು ಈ ಲಸಿಕೆಯ ಖರೀದಿಗೆ ಆಸಕ್ತಿ ತೋರಿಸಿವೆ. ಹಾಗಾಗಿ 200 ಮಿಲಿಯನ್ ದೋಸೆಜ್‍ಗಳನ್ನು ಉತ್ಪಾದಿಸಲು ರಷ್ಯಾ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಸ್ಪುಟ್ನಿಕ್ ವಿ. ನಲ್ಲಿ ಬಳಸಲಾಗುತ್ತಿರುವ ಅಡೆನೋವೈರಸ್ ಕೋವಿಡ್ ಸೋಂಕನ್ನು ಕೊಲ್ಲುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿವೆ. ಚಿಂಪಾಂಜಿ ರೂಪಾಂತರದ ಲಸಿಕೆಯಲ್ಲಿ ಇದು ಪರಿಣಾಮ ಬೀರಿದೆ. ಈ ಮೊದಲು ಸಾರ್ಸ್ ಕೋವಿಡ್-2ನಲ್ಲೂ ಅಡೆನೋವೈರಸ್ ವೈಜ್ಞಾನಿಕ ಅಂಶವನ್ನು ಸೇರ್ಪಡೆ ಮಾಡಲಾಗಿದೆ.

ಸ್ಪುಟ್ನಿಕ್ ಲಸಿಕೆಯನ್ನು 2ರಿಂದ 8 ಡಿಗ್ರಿ ಶೀತ ವಾತಾವರಣದಲ್ಲಿ ಸಂಗ್ರಹಿಸಿಡಬೇಕಾಗಿದೆ. ಇದು ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಮೈನಸ್ 70 ಕನಿಷ್ಠ ಮೈನಸ್ 20 ಡಿಗ್ರಿ ಸೆಲ್ಸಿಯಸ್‍ನಲ್ಲಿ ಸಂಗ್ರಹಿಸಿಡಲು ಸೂಕ್ತ. ಆದರೆ ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಇಷ್ಟು ಉತ್ಕøಷ್ಟವಾದ ಶೈತಲೀಗಾರಗಳನ್ನು ಸ್ಥಾಪಿಸುವುದು ಕಷ್ಟ ಸಾಧ್ಯವಾಗಿರುವುದರಿಂದ ಔಷಧಿ ಸಂಗ್ರಹಣೆಯ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ.

ಲಸಿಕೆಗೆ ದುಭಾರಿ ದರ ನಿಗದಿ ಮಾಡದೇ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಮತ್ತು ಜನಸಾಮಾನ್ಯರನ್ನು ಕೈಗೆಟಕುವಂತೆ 10 ಡಾಲರ್ ಒಳಗೆ ನಿಗದಿ ಮಾಡುವ ಚಿಂತನೆ ನಡೆದಿದೆ. ಇದನ್ನು ದೇಶೀಯವಾಗಿ ಉತ್ಪಾದಿಸಿ ದರವನ್ನು ಮತ್ತಷ್ಟು ಕಡಿಮೆ ಮಾಡಲು ಭಾರತ, ದಕ್ಷಿಣ ಕೋರಿಯಾ, ಚೀನಾ ಮತ್ತಿತರ ದೇಶಗಳೊಂದಿಗೆ ರಷ್ಯಾ ಸರ್ಕಾರ ಒಪ್ಪಂದ ಮಾಡಿಕೊಳ್ಳುತ್ತದೆ.

Facebook Comments