ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವೈಭವ್‍ ಜೈನ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಡ್ರಗ್ಸ್ ಜಾಲದ ಬಗ್ಗೆ ಬಿರುಸಿನ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು ನಗರದ ನಿವಾಸಿ ವೈಭವ್ ಜೈನ್ ಬಂಧಿತ ಆರೋಪಿ.

ಡ್ರಗ್ಸ್ ಜಾಲದ ಬಗ್ಗೆ ಕಾಟನ್ ಪೇಟೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಈತ ಐದನೆ ಆರೋಪಿ. ಚಿನ್ನದ ವ್ಯಾಪಾರಿಯಾದ ಈತ ರವಿಶಂಕರ್ ಮತ್ತು ರಾಗಿಣಿ ಆಯೋಜಿಸುತ್ತಿದ್ದ ಡ್ರಗ್ಸ್ ಪಾರ್ಟಿಗೆ ಗಣ್ಯ ವ್ಯಕ್ತಿಗಳ ಪುತ್ರರನ್ನು ಕರೆ ತರುತ್ತಿದ್ದ.

ನಟಿ ರಾಗಿಣಿ ಆಪ್ತರಲ್ಲಿ ವೈಭವ್ ಜೈನ್ ಒಬ್ಬನಾಗಿದ್ದ ಈತನೂ ಸಹ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ. ಇದೀಗ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಾರೆ ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಇದುವರೆಗೂ 10 ಮಂದಿಯನ್ನು ಬಂಧಿಸಿದ್ದಾರೆ.

ನಟಿಯರಾದ ರಾಗಿಣಿ ಮತ್ತು ಸಂಜನಾ ಅವರ ಬಂಧನದ ನಂತರ ಉಳಿದ ಆರೋಪಿಗಳ ಬಂಧನದ ಕಾರ್ಯ ಚುರುಕುಗೊಂಡಿದೆ. ಕಾಟನ್‍ಪೇಟೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Facebook Comments