ಅಸಾಧಾರಣ ಬಾಲ ಪ್ರತಿಭೆ ವೈನವೀ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಲ್ಲೇಶ್ವರಂ ನ ಪ್ರತಿಷ್ಠಿತ ವಿದ್ಯಾ ಸಂಸ್ತೆ ಕ್ಲೋನಿ ಕಾನ್ವೆಂಟ್ ನಲ್ಲಿ, ಯುಕೆಜಿ ಯಲ್ಲಿ ಓದುತ್ತಿರುವ, ಅಸಾಧಾರಣ ಬಾಲ ಪ್ರತಿಭೆ ಕುಮಾರಿ ವೈನವೀ. ಬಿ. ಸಿ., ತನ್ನ ಐದನೇ ವಯಸ್ಸಿಗೆ ಭಗವದ್ಗೀತೆಯ ಎಲ್ಲಾ ಹದಿನೆಂಟು ಅಧ್ಯಾಯ ಗಳ ಏಳುನೂರು ಶ್ಲೋಕಗಳನ್ನು , ಜೊತೆ ಜೊತೆ ಯಲ್ಲಿ, ದಕ್ಷಿಣ ಮೂರ್ತಿ ಸ್ತೋತ್ರ, ಗಜೇಂದ್ರ ಮೋಕ್ಷ ಸ್ತೋತ್ರ ಶಿವ ತಾಂಡವ ಸ್ತೋತ್ರ, ಹನುಮ ಚಾಲಿಸ ಶ್ಲೋಕ, ಕಾಲಭೈರವಾಷ್ಟಕಮ್ ಗಳನ್ನು ಸಹಾ ಕಲಿತಿದ್ದು, ಇದೀಗ ವಿಷ್ಣು ಸಹಸ್ರ ನಾಮವನ್ನು ಸಹಾ ಕಲಿಯುತಿದ್ದು, ಸಧ್ಯ ದಲ್ಲಿಯೆ ಅದನ್ನು ಸಂಪೂರ್ಣ ಕಲಿತು ಮುಗಿಸುವವಳಿದ್ದಾಳೆ. ಅಲ್ಲದೆ, ಈ ಬಾಲಕಿ ನೃತ್ಯ ಹಾಗೂ ಸಂಗೀತ ವನ್ನೂ ಸಹಾ ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾಳೆ.

ಈ ಬಾಲ ಪ್ರತಿಭೆಯ ಸಾಮರ್ಥ್ಯ, ಅಗಾಧ ನೆನಪಿನ ಶಕ್ತಿಗೆ ಮಠ ಮಾನ್ಯಗಳ ಗುರುವರ್ಯರು, ಸಂಸ್ಕೃತ ಪಂಡಿತರು, ಶಿಕ್ಷಕರು ಮನಗಂಡು ಸೂಕ್ತ ರೀತಿಯಲ್ಲಿ ವೇದಿಕೆ ಕಲ್ಪಿಸಿ, ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ!
ಆ ಬಾಲಕಿಗೆ ಹುಟ್ಟಿನಿಂದ ಹಾಗೂ ಮನೆಯ ವಾತಾವರಣದಿಂದ ಬಂದಿರುವ ಆಧ್ಯಾತ್ಮಿಕ ಚಿಂತನೆ, ಶ್ರದ್ಧೆ, ಭಕ್ತಿ ಹಾಗೂ ಅಂತರ್ಗತ ಸಂಸ್ಕಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, , ಉಜ್ವಲ ಭವಿಷ್ಯದ ಕುರಿತು ಸಹಾ ಮಾತನಾಡಿದ್ದಾರೆ.

# ಈ ಪ್ರತಿಭಾ ಕಾರಂಜಿ
ಕಲಿಕಾ ವಿಷಯಗಳು ಈಗಾಗಲೇ, ಪ್ರಜಾ ಟಿ. ವಿ. ಹಾಗೂ ಶ್ರೀ ಶಂಕರ ವಾಹಿನಿಗಳಲ್ಲದೆ, ಮಂಗಳೂರಿನ ಇಸ್ಕಾನ್ ನ ಭಗವದ್ಗೀತಾ ಕಲಿಕಾ ಸರಣಿ ಕಾರ್ಯಕ್ರಮದಲ್ಲಿ ಬಿತ್ತರಗೊಂಡಿವೆ.

ಇತ್ತೀಚೆಗೆ, ಈ ಪುಟಾಣಿಯ ಅಸಾಧಾರಣ ಪ್ರತಿಭೆಯ ಕುರಿತು, ಈ ಸಂಜೆ ದೈನಿಕ ಸುದ್ದಿ ಮಾದ್ಯಮದಲ್ಲಿಯು ಸಹಾ ವರದಿಯಾಗಿದೆ ಎಂಬುದು ಹೆಮ್ಮೆಯ ವಿಚಾರ…!
ದೂ.9448512151/ 9480614574/ 9482225354..

Facebook Comments

Sri Raghav

Admin