ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಲಘು ಲಾಠಿಪ್ರಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡ, ಅ.13- ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಡಿಜೆ ಸೌಂಡ್‍ಗೆ ಸ್ಟೆಪ್ ಹಾಕಲು ಅವಕಾಶ ಕೊಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಯುವಕರು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ನಗರದ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಲಾಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಯೋಜಿಸಲಾಗಿತ್ತು.
ಜಯಂತಿ ಪ್ರಯುಕ್ತ ಜನಾಂಗದ ವತಿಯಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

ಮೆರವಣಿಗೆಯು ಜಾನಪದ ಕಲಾ ತಂಡದೊಂದಿಗೆ ಅದ್ದೂರಿಯಾಗಿ ಸಾಗಿತ್ತು. ಅಷ್ಟರಲ್ಲಿ ಯುವಕರು ಧ್ವನಿವರ್ಧಕಗಳಿದ್ದರೂ ಡಿಜೆ ಸೌಂಡ್ ಹಾಕಿಕೊಂಡು ನೃತ್ಯಕ್ಕ ಮುಂದಾದರು. ಅಷ್ಟರಲ್ಲಿ ಪೊಲೀಸರು ಇದರಿಂದ ಗಲಾಟೆಯಾಗುತ್ತದೆ ಎಂದು ತಿಳಿಸಿ ಡಿಜೆಯನ್ನು ನಿರಾಕರಿಸಿದರು.

ಇದರಿಂದ ಕೆರಳಿದ ಯುವಕರು ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸಿದರು.ಹಾಗಾಗಿ ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ನಂತರ ಮೆರವಣಿಗೆ ಪೂರ್ಣಗೊಳಿಸಿ ಸುಸೂತ್ರವಾಗಿ ಕಾರ್ಯಕ್ರಮ ನಡೆಯುವಂತೆ ನೋಡಿಕೊಂಡರು.

Facebook Comments

Sri Raghav

Admin