ವ್ಯಾನ್-ಟ್ರೈಲರ್ ಡಿಕ್ಕಿ : 7 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ್, ಸೆ.6-ವ್ಯಾನ್ ಮತ್ತು ಟ್ರೈಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಏಳು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿರುವ ಭೀಕರ ಘಟನೆ ರಾಜಸ್ತಾನದ ಭಿಲ್ವಾಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.  ಭಿಲ್ವಾಡ ಜಿಲ್ಲೆಯ ಬಿಜೊಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರ್‍ಪುರ್ ಬಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಿಲ್ವಾಡದಿಂದ ಕೋಟಾಗೆ ತೆರಳುತ್ತಿದ್ದ ವ್ಯಾನ್, ಟ್ರಕ್ ಟ್ರೈಲರ್‍ಗೆ ಅಪ್ಪಳಿಸಿತು. ಈ ಭೀಕರ ಅಪಘಾತದಲ್ಲಿ ಉಮೇಶ್ (40), ಮುಕೇಶ್ (23), ಜಮ್ನಾ(45), ಅಮರ್‍ಚಂದ್(32), ರಾಜು (21), ರಾಧೇಶ್ಯಾಂ(56) ಮತ್ತು ಶಿವಲಾಲ್ (40) ಸಾವಿಗೀಡಾಗಿದ್ದಾರೆ.  ಮೃತ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಂತರ ಅವರ ಕುಟುಂಬಗಳಿಗೆ ನೀಡಲಾಯಿತು.

Facebook Comments