ಕಂದಕಕ್ಕೆ ವ್ಯಾನ್ ಉರುಳಿ ಬಿದ್ದು 7 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ(ಆಂಧ್ರಪ್ರದೇಶ), ಅ.30- ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಂದು ಮುಂಜಾನೆ ವ್ಯಾನೊಂದು ಹಳ್ಳಕ್ಕೆ ಉರುಳಿ ಏಳು ಮಂದಿ ಮೃತಪಟ್ಟು, ಇತರ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಅಪಘಾತ ನಡೆದ ಸ್ಥಳದಲ್ಲಿ ಐವರು ಸಾವಿಗೀಡಾಗಿದ್ದು, ಇನ್ನಿಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಗಿತಿಕೊಂಡ ಬಳಿ ವ್ಯಾನ್ ಬೆಟ್ಟ ಪ್ರದೇಶದಲ್ಲಿ ಇಳಿಜಾರಿನ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ವಿಫಲಗೊಂಡು ವಾಹನವು ರಸ್ತೆ ಬದಿ ಕಂದಕಕ್ಕೆ ಉರುಳಿ ಈ ದುರಂತ ಸಂಭವಿಸಿತು. ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ 20 ಜನರು ವ್ಯಾನ್‍ನಲ್ಲಿ ತಮ್ಮ ಸ್ವಗ್ರಾಮ ಗೋಕಾವರಂಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ 13 ಜನರನ್ನು ಮಹೇಂದ್ರವರಂನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ.

Facebook Comments