ವಾಣಿವಿಲಾಸ ಸಾಗರಕ್ಕೆ ಭದ್ರೆ ಹರಿವು, ಅಚ್ಚುಕಟ್ಟು ರೈತರ ಮುಖದಲ್ಲಿ ಮೂಡಿದ ಮಂದಹಾಸ

ಈ ಸುದ್ದಿಯನ್ನು ಶೇರ್ ಮಾಡಿ

ಹಿರಿಯೂರು,ಸೆ.10- ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ಮತ್ತೆ ಚಾಲನೆಯಾಗಿದ್ದು ವಾಣಿ ವಿಲಾಸ ಸಾಗರಕ್ಕೆ ಮತ್ತೆ ಭದ್ರೆ ಹರಿವು ಆರಂಭವಾಗಿದ್ದು, ಕುಕ್ಕ ಸಮುದ್ರ ಕೆರೆ ಸಂಪೂರ್ಣ ಭರ್ತಿಯಾಗಿದ್ದು ಭದ್ರೆ ಮೈತುಂಬಿ ಹರಿಯುತ್ತಿದ್ದಾಳೆ ರೈತರ ಮುಖದಲ್ಲಿ ಸಂತಸ ಮೂಡಿದೆ.

ಹೈ ವೋಲ್ಟೇಜ್ ಸಮಸ್ಯೆಯಿಂದ ಮೋಟರ್ ಪಂಪ್ ಗಳು ಸದಾ ಟ್ರಿಪ್ ಆಗುತ್ತಿದ್ದು ಹೈದರಾಬಾದ್ ನಿಂದ ತಜ್ಞರನ್ನು ಕರೆಸಿ ದುರಸ್ತಿ ಮಾಡಿಸಿದ್ದು ಈಗ ಹೈ ವೋಲ್ಟೇಜ್ ಇದ್ದರೂ ಕೂಡಾ ಪಂಪ್ ಸದಾ ನಡೆಯುವಂತೆ ದುರಸ್ತಿ ಮಾಡಲಾಗಿದೆ ಎಂಬುದಾಗಿ ಭದ್ರಾ ಯೋಜನೆ ಅನುಷ್ಠಾನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಕಕಷ್ಟು ಮಳೆಯಾಗುತ್ತಿದ್ದು ಭದ್ರಾ ಜಲಾಶಯದಿಂದ ಪಂಪ್ ಮಾಡಲಾದ ನೀರು ಈಗಾಗಲೇ ಕುಕ್ಕಸಮುದ್ರ ತಲುಪಿದೆ. ಕುಕ್ಕ ಸಮುದ್ರ ಕೆರೆಯು ಭರ್ತಿಯಾಗಿ ವೇದಾವತಿ ನದಿ ಮೂಲಕ ವಾಣಿ ವಿಲಾಸ ಸಾಗರಕ್ಕೆ ಹರಿಯಲು ಮುಖ ಮಾಡಿದೆ.

ಹೊಸದುರ್ಗ, ತರೀಕೆರೆ, ಅಜ್ಜಂಪುರ ತಾಲೂಕುಗಳಾದ್ಯಂತ ಹೆಚ್ಚಿನ ಮಳೆಯಾಗಿದ್ದರಿಂದಾಗಿ ಸಾಕ? ವೇದಾವತಿ ನದಿ ಕೂಡಾ ಹರಿಯುತ್ತಿದ್ದು ಗುರುವಾರ ಬೆಳಗಿನ ಜವದ ವೇಳೆಗೆ ಭದ್ರಾ ನೀರು ವಾಣಿ ವಿಲಾಸ ಸಾಗರ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Facebook Comments