ವರುಣ್ ಚಕ್ರವರ್ತಿ ಆಟಕ್ಕೆ ಸಚಿನ್‍ ಫಿದಾ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.27- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಕಬಳಿಸಿ ಕೆಕೆಆರ್ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಯುವ ಆಟಗಾರ ವರುಣ್ ಚಕ್ರವರ್ತಿ ಆಟಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆಗಳು ಬರುತ್ತಿರುವ ಬೆನ್ನಲ್ಲೇ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಕೂಡ ಫಿದಾ ಆಗಿದ್ದಾರೆ. ವೆಸ್ಟ್‍ಇಂಡೀಸ್‍ನ ಸ್ಪಿನ್ ಗಾರುಡಿಗ ಸುನೀಲ್‍ನರೇನ್ ಅವರನ್ನು ಮಿಸ್ಟರ್ ಸ್ಪಿನ್ನರ್ ಎಂದು ಕರೆಯುತ್ತಾರೆ, ಆದರೆ ಸುನೀಲ್ ಪ್ರತಿನಿಧಿಸುತ್ತಿರುವ ಕೆಕೆಆರ್ ತಂಡದಲ್ಲೇ ಇರುವ ವರುಣ್ ಚಕ್ರವರ್ತಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು ಅವರ ಆಟಕ್ಕೆ ನಾನು ಪ್ರಭಾವಿತನಾಗಿದ್ದೇನೆ ಎಂದು ತಮ್ಮ ಫೇಸ್‍ಬುಕ್‍ನಲ್ಲಿ ಸಚಿನ್ ಹೇಳಿದ್ದಾರೆ.

ವರುಣ್ ಅವರು ಯಾವುದೇ ಸಂದರ್ಭದಲ್ಲಿ ಆದರೂ ತಮ್ಮ ಮಿಸ್ಟರಿ ಬೌಲಿಂಗ್ ಹಾಗೂ ವೇರಿಯೇಷನ್ ಮೂಲಕ ಬೌಲಿಂಗ್ ಮಾಡುವ ಶಾಂತಚಿತ್ತ ಮನಸ್ಥಿತಿ ಇರುವ ಬೌಲರ್ ಆದ್ದರಿಂದಲೇ ಡೆಲ್ಲಿ ವಿರುದ್ಧ ಅಂತಹ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ಡೆಲ್ಲಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 20-20 ಕ್ರಿಕೆಟ್ ಸರಣಿಗೆ ವರುಣ್ ಆಯ್ಕೆಯಾಗಿದ್ದು ಅವರ ಕ್ರಿಕೆಟ್ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

ಪ್ರಸಕ್ತ ಐಪಿಎಲ್‍ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ವರುಣ್‍ಚಕ್ರವರ್ತಿ ಅವರು 12 ಪಂದ್ಯಗಳಿಂದ 12 ವಿಕೆಟ್ ಕೆಡವಿರುವುದಲ್ಲದೆ ಕಡಿಮೆ ರನ್‍ರೇಟ್ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿರುವುದರಿಂದಲೇ ಆಸ್ಟ್ರೇಲಿಯಾದ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

Facebook Comments