‘ಮರ್ದ್ ಕೊ ದರ್ದ್ ನಹೀ ಹೋತಾ’ ಚಿತ್ರಕ್ಕೆ ಪ್ರತಿಷ್ಠಿತ ಟಿಫ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Mard--01

ಟೊರೊಂಟೊ, ಸೆ.18-ವಾಸನ್ ಬಾಲಾ ನಿರ್ದೇಶನದ ಮರ್ದ್ ಕೊ ದರ್ದ್ ನಹೀ ಹೋತಾ ಭಾರತೀಯ ಸಿನಿಮಾ ಅಂತಾರಾಷ್ಟ್ರೀಯ ಸಾಧನೆ ಮಾಡಿದೆ. 43ನೇ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪೂರ್ವಭಾವಿ ಪ್ರದರ್ಶನ ಕಂಡು ವಿದೇಶಗಳ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೇ ಹಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಮರ್ದ್, ಗ್ರೋಲ್ಷ್ ವೀವರ್ಸ್ ಚಾಯ್ಸ್ ಪುರಸ್ಕಾರ ಗಳಿಸಿದೆ.

ಡೇವಿಡ್ ಗೋರ್ಡಾನ್ ಗ್ರೀನ್ ಮತ್ತು ಸ್ಯಾಮ್ ಲೆವಿನ್‍ಸನ್ ನಿರ್ದೇಶನದ ಹ್ಯಾಲೋವೀನ್ ಮತ್ತು ಅಸಾಸಿನೇಷನ್ ನೇಷನ್ ಸಿನಿಮಾಗಳು ಅನುಕ್ರಮವಾಗಿ ದ್ವೀತೀಯ ಮತ್ತು ತೃತೀಯ ಸ್ಥಾನ ಪಡೆದಿದೆ.

ಹೊಸಬರೇ ನಟಿಸಿರುವ ಮರ್ದ್ ಕೊ ದರ್ದ್ ನಹೀ ಹೋತಾ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದಕ್ಕೆ ನಿರ್ದೇಶಕ ವಾಸನ್ ಬಾಲಾ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಮನ್ಯು ದಸ್ಸಾನಿ ನಟಿಸಿರುವ ಈ ಸಿನಿಮಾ, ಯಾವುದೇ ನೋವಿನ ಅನುಭವವಾಗದ ದೇಹಸ್ಥಿತಿ ನ್ಯೂನ್ಯತೆ ಹೊಂದಿರುವ ಯುವಕನ ಕಥೆ. ತನಗೆ ಗಾಯವಾಗುವ ನೋವು ಇಲ್ಲದ ಈತ ಹಿಂಸಾತ್ಮಕ ಹೊಡೆದಾಟ ಮತ್ತು ಹೋರಾಟಗಳಲ್ಲಿ ಭಾಗವಹಿಸುತ್ತಾನೆ. ಈ ಸಿನಿಮಾದಲ್ಲಿ ರಾಧಿಕಾ ಮದನ್ ನಾಯಕಿಯಾಗಿ ನಟಿಸಿದ್ದಾರೆ.

ಲಂಡನ್ ಮೂಲದ ಸಂಧ್ಯಾ ಸೂರಿ ನಿರ್ದೇಶನದ ದಿ ಫೀಲ್ಡ್ ಹೆಸರಿನ ಮತ್ತೊಂದು ಸಿನಿಮಾ ಐಡಬ್ಲ್ಯುಸಿ ಅಂತಾರಾಷ್ಟ್ರೀಯ ಕಿರು ಸಿನಿಮಾ ಪ್ರಶಸ್ತಿ ಗಳಿಸಿದೆ.

Facebook Comments

Sri Raghav

Admin