ಬಂದ್ ತಡೆಗೆ ಸರ್ಕಾರದ ಷಡ್ಯಂತ್ರ: ವಾಟಾಳ್ ನಾಗರಾಜ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ರಾಜ್ಯ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳಿಗೆ ರಾಜ್ಯೋತ್ಸವ ಆಚರಣೆಗೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಬಂದ್ ವಿಫಲಗೊಳಿಸುವ ಷಡ್ಯಂತ್ರವನ್ನು ರಾಜ್ಯಸರ್ಕಾರ ಮಾಡುತ್ತಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯೋತ್ಸವದೊಂದು ಕರಾಳ ದಿನಾಚರಣೆ ಮಾಡುವ ಮರಾಠಿಗರಿಗೆ ಮರಾಠ ಅಭಿವೃದ್ಧಿ ಪ್ರಾಕಾರ ಅದಕ್ಕೆ 50 ಕೋಟಿ ಅನುದಾನ. ಪ್ರತಿದಿನ ಕನ್ನಡದ ಉಳಿವಿಗಾಗಿ ಹೋರಾಡಿ ನಾಡು-ನುಡಿ, ಸಂಸ್ಕøತಿ, ನೆಲ- ಜಲಕ್ಕಾಗಿ ಬಡಿದಾಡುವ ಕನ್ನಡ ಸಂಘಟನೆಗಳಿಗೆ ಅನುದಾನ ಕಡಿತ. ಇದು ಯಾವ ನ್ಯಾಯ.

ಕನ್ನಡ ಚಳವಳಿ ವಾಟಾಳ್ ನಾಗರಾಜ್ ಅವರ ಆಕ್ರೋಶ ಭರಿತ ಮಾತು. ಮರಾಠ ಅಭಿವೃದ್ಧಿ ಪ್ರಾಕಾರ ರಚನೆ ಮಾಡಿದ ಸರ್ಕಾರ ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಅದನ್ನು ನಿಗಮವಾಗಿ ಬದಲಾಯಿಸಿ ಮರಾಠಿ ಪರ ಧೋರಣೆ ಅನುಸರಿಸುತ್ತಿದೆ. ಇದನ್ನು ವಿರೋಸುವ ಕನ್ನಡಪರ ಸಂಘಟನೆಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡುವ ಮೂಲಕ ಬ್ಲಾಕ್‍ಮೇಲ್ ರಾಜಕಾರಣ ಮಾಡುತ್ತಿದೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಕನ್ನಡಪರ ಹೋರಾಟವನ್ನು ನಿತ್ಯ ನಿರಂತರವಾಗಿ ಮಾಡುತ್ತೇವೆ. ಮುಂದೆಯೂ ಮಾಡುತ್ತೇವೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2000ಕ್ಕೂ ಹೆಚ್ಚು ಸಂಘಟನೆಗಳಿಗೆ ಅನುದಾನ ನೀಡಲಾಗುತ್ತಿದೆ. ಹೋರಾಟವನ್ನು ತೀವ್ರಗೊಳಿಸಿರುವ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಮುಜುಗರ ತರಲು ಅನುದಾನ ವಿಷಯವನ್ನು ಮುಂದೆ ತಂದಿದ್ದಾರೆ. ರಾಜ್ಯೋತ್ಸವಕ್ಕಾಗಿ ಇಲಾಖೆ ಅನುದಾನ ನೀಡಿದೆ. ವಾಟಾಳ್ ನಾಗರಾಜ್ ಮಗನ, ಮಗಳ ಮದುವೆಗಾಗಿ ಅಲ್ಲ, ಮನೆ ಕಟ್ಟಲು ಅಲ್ಲ ಎಂದು ಹೇಳಿದರು.

1962ರಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತ ಬಂದಿದ್ದೇನೆ. ಸರ್ಕಾರದಿಂದ ಅನುದಾನ ಪಡೆದಿದ್ದೇನೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ 5 ವರ್ಷಗಳಿಂದಲೂ ರಾಜ್ಯೋತ್ಸವ ಆಚರಣೆಗೆ ಅನುದಾನ ನೀಡಲಾಗಿದೆ. ಆದರೆ ಯಡಿಯೂರಪ್ಪ ಸರ್ಕಾರದಲ್ಲಿ ರಾಜ್ಯೋತ್ಸವ ಆಚರಣೆಗೆ ಅನುದಾನ ನೀಡಿಲ್ಲ ಎಂದು ವಾಟಾಳ್ ಆರೋಪಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿವಿಧ ಕನ್ನಡಪರ ಸಂಘಟನೆಗಳಿಗೆ ನೀಡಬೇಕಿದ್ದ ಅನುದಾನವನ್ನು ನಿಲ್ಲಿಸಿದೆ. ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದ್ದನ್ನು ನಾವು ಸಹಿಸಿಕೊಳ್ಳಬೇಕೇ ಇದರ ವಿರುದ್ಧ ಹೋರಾಟ ಮಾಡಬಾರದು ಇದನ್ನು ಖಂಡಿಸಿ ರಾಜ್ಯ ಬಂದ್‍ಗೆ ಕರೆ ಕೊಟ್ಟಿದ್ದಕ್ಕೆ ಅನುದಾನ ಕಡಿತ ಮಾಡುವ ಮೂಲಕ ನಮ್ಮ ಹೋರಾಟ ವಿಫಲಗೊಳಿಸುವ ಷಡ್ಯಂತ್ರವನ್ನು ಸರ್ಕಾರ ಮಾಡಲು ಮುಂದಾಗಿದೆ.

ಇದಕ್ಕೆ ನಾವು ಜಗ್ಗುವುದಿಲ್ಲ. ಕೋವಿಡ್-19 ಕಾರಣದಿಂದ ಅನುದಾನ ಕೊರತೆಯ ನೆಪ ಹೇಳುತ್ತಿದೆ. ಆದರೆ ಕರ್ನಾಟಕ ಸರ್ಕಾರ ನೌಕರರ ಸಂಘಕ್ಕೆ 10 ಲಕ್ಷ ನೀಡಿದೆ. ಮಠಗಳಿಗೆ ಸಾಕಷ್ಟು ಅನುದಾನವನ್ನು ಸರ್ಕಾರ ನೀಡಿದೆ. ನಾಡ ಹಬ್ಬ ರಾಜ್ಯೋತ್ಸವ ಆಚರಣೆ ಮಾಡುವ ಕನ್ನಡ ಸಂಘಗಳಿಗೆ ಅನುದಾನ ನೀಡಲು ಮೀನಾಮೇಷ ಎಣಿಸುತ್ತದೆ. ಆದರೆ ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಅನುದಾನ ಮೀಸಲಿರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments