ಹುಚ್ಚರನ್ನು ಮೀರಿಸುವಂತೆ ವರ್ತಿಸುತ್ತಿದ್ದಾರೆ ರಾಜಕಾರಣಿಗಳು : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23- ಹಾನಗಲ್, ಸಿಂಧಗಿ ಉಪಚುನಾವಣೆಯಲ್ಲಿ ನಾಲಿಗೆ ನಿಯಂತ್ರಣವಿಲ್ಲದೆ ಮಾತನಾಡುತ್ತಿರುವ ರಾಜಕಾರಣಿಗಳಿಂದ ಮತದಾರರಿಗೆ ಅವಮಾನ ಮತ್ತು ಹಿಂಸೆಯಾಗುತ್ತಿದೆ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ವಿನೂತನ ಪ್ರತಿಭಟನೆ ನಡೆಸಿದರು.

ಮನಸ್ಸಿನ ಸೀಮಿತ ಕಳೆದುಕೊಂಡು ದುರಹಂಕಾರದ ಪರಮಾವಯಲ್ಲಿ ಮಾತನಾಡುತ್ತಿರುವ ರಾಜಕಾರಣಿಗಳು ಮಾತಿನ ಮೇಲೆ ಹಿಡಿತ ತಪ್ಪಿ ವೈಯಕ್ತಿಕ ನಿಂದನೆ, ಅಪನಿಂದನೆಗಳನ್ನು ಮಾಡುತ್ತಿರುವುದು ಮತದಾರರಿಗೆ ಕಿರಿಕಿರಿಯಾಗುತ್ತಿದೆ ಮತ್ತು ಅಗೌರವವನ್ನು ಉಂಟು ಮಾಡುತ್ತಿದೆ.

ಕೂಡಲೇ ಆಯೋಗ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು. ಉಪಚುನಾವಣೆಯಲ್ಲಿ ಒಬ್ಬರಿಗೊಬ್ಬರು ತಮ್ಮ ಮಾನ ಹರಾಜು ಹಾಕಿಕೊಳ್ಳುತ್ತಿದ್ದಾರೆ. ಭದ್ರವಿಲ್ಲದ ನಾಲಿಗೆಯಿಂದ ಉಪಚುನಾವಣಾ ಅಖಾಡ ಹುಚ್ಚರ ಸಂತೆಯಂತಾಗಿದೆ. ಹುಚ್ಚರನ್ನು ಮೀರಿಸುವಂತೆ ರಾಜಕಾರಣಿಗಳು ವರ್ತಿಸುತ್ತಿದ್ದಾರೆ. ಸುಸಂಸ್ಕøತವಿಲ್ಲದ ಈ ಮಾತುಗಳಿಂದ ಭವಿಷ್ಯದ ಪೀಳಿಗೆಗೆ ಏನು ಹೇಳಲು ಹೊರಟಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಚುನಾವಣಾ ರಾಜಕಾರಣದಲ್ಲಿ ಪ್ರಾಮಾಣಿಕತೆಯ ಮಾತುಗಳಿರಬೇಕು. ರಾಜಕಾರಣಿಗಳ ಮಾತುಗಳನ್ನು ಕೇಳಲು ಜನ ಕಾಯುತ್ತಿರಬೇಕು. ಆದರೆ ಈಗಿನ ರಾಜಕಾರಣಿಗಳ ಮಾತುಗಳು ಅಸಯ್ಯದ ಪರಮಾವಯಾಗಿದೆ. ಇದನ್ನು ವಿರೋಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇನ್ನಾದರೂ ಅವರು ತಿದ್ದಿಕೊಳ್ಳಲಿ ಎಂದು ಹೇಳಿದರು.

Facebook Comments

Sri Raghav

Admin