ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರದ ವಿರುದ್ಧ ಕಠಿಣ ಸ್ವರಮಾಕ್ಕೆ ಆಗ್ರಹಿಸಿ ವಾಟಾಳ್ ಪ್ರೊಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.7-ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳ ಕಡಿವಾಣಕ್ಕೆ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಲೋಕಾಯುಕ್ತ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಿಡಿ ಭಸ್ಮ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಪಾರಿ ಸಿಡಿ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಹಾಳಾಗುತ್ತದೆ. ಈ ವ್ಯವಸ್ಥೆ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು.

ಸಿಡಿ ಬಿಡುಗಡೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ಯಾರಿಗೂ ನ್ಯಾಯ ಸಿಗುವುದಿಲ್ಲ. ಬ್ಲಾಕ್‍ಮೇಲ್ ಮಾಡುವುದು ಹಣಕ್ಕೋಸ್ಕರ. ಇಂತಹ ಸಿಡಿಗಳನ್ನು ಮಾಡಿ ಬಿಡುಗಡೆ ಮಾಡುವುದರಿಂದ ವ್ಯವಸ್ಥೆ ಹಾಳಾಗುತ್ತದೆ. ಇದನ್ನು ನಿಯಂತ್ರಿಸಲು ಕಾನೂನು ತರಬೇಕು. ಬೇಕಾಬಿಟ್ಟಿ ವರ್ತಿಸುವ ಜನಪ್ರತಿನಿಗಳನ್ನು ನಿಯಂತ್ರಿಸಲು ಲೋಕಾಯುಕ್ತವನ್ನು ಬಲಪಡಿಸಬೇಕಾದ ಅಗತ್ಯವಿದೆ.

ಲೋಕಾಯುಕ್ತರನ್ನು ಮುಖ್ಯಮಂತ್ರಿಗಳು ನೇಮಕ ಮಾಡಬಾರದು. ನೇರವಾಗಿ ಸುಪ್ರೀಂಕೋರ್ಟ್, ಹೈಕೋರ್ಟ್ ನೇಮಕ ಮಾಡಬೇಕು ಎಂದು ಹೇಳಿದರು.ಜನಪ್ರತಿನಿಗಳ ವಿರುದ್ಧ ಇದೇ ರೀತಿ ಸಿಡಿಗಳು ಬಿಡುಗಡೆಯಾಗುತ್ತ ಹೋದರೆ ಅದನ್ನೇ ಒಂದು ಉದ್ಯಮ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ಸಿಡಿ ವಿಚಾರವನ್ನು ನಾನು ಬೆಂಬಲಿಸುತ್ತಿಲ್ಲ. ಆದರೆ, ಇದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಜನಪ್ರತಿನಿಗಳು ಶಾಸನ ಸಭೆಯನ್ನು ಹಾಳು ಮಾಡದಂತೆ ವರ್ತಿಸಬೇಕಾದ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನಪ್ರತಿನಿಗಳಲ್ಲಿ ಅಂತಹ ವರ್ತನೆ ಕಡಿಮೆಯಾಗುತ್ತಿದೆ. ಭ್ರಷ್ಟ ವ್ಯವಸ್ಥೆಯೇ ಹೆಚ್ಚಾಗುತ್ತಿದೆ ಎಂದು ಹೇಳಿದರು.

Facebook Comments

Sri Raghav

Admin