ಎಂ.ಪಿ.ವೀರೇಂದ್ರ ಕುಮಾರ್ ನಿಧನಕ್ಕೆ ಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 29-ರಾಜ್ಯಸಭಾ ಸದಸ್ಯ ಮತ್ತು ಮಲೆಯಾಳಂ ದಿನಪತ್ರಿಕೆ ಮಾತೃಭೂಮಿ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ವೀರೇಂದ್ರ ಕುಮಾರ್ ನಿಧನಕ್ಕೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅನೇಕ ಗಣ್ಯರು ವೀರೇಂದ್ರ ಕುಮಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವರು,ಮತ್ತು ಪಿಟಿಐ ವಾರ್ತಾ ಸಂಸ್ಥೆಯ ನಿರ್ದೇಶಕರ ಮಂಡಳಿಯ ಸದಸ್ಯರೂ ಆಗಿದ್ದ ವೀರೇಂದ್ರ ಕುಮಾರ್ ರಾಜಕೀಯ ಮತ್ತು ಪತ್ರಿಕೋದ್ಯಮ ಇವರೆಡೂ ರಂಗಗಳಲ್ಲಿ ಹೆಸರಾಗಿದ್ದರು, ಬಡವರು ಮತ್ತು ಆರ್ಥಿಕ ದುರ್ಬಲರ ಪರ ಸದಾ ಅವರು ಧನಿ ಎತ್ತುತ್ತಿದ್ದರು ಎಂದು ಗಣ್ಯರು ಮೃತ ಗುಣಗಾನ ಮಾಡಿದ್ದಾರೆ.

Facebook Comments