ಜಮೀನಿನಲ್ಲೇ ಕೊಳೆತ ಸೊಪ್ಪು-ತರಕಾರಿ, ಗಗನಕ್ಕೇರಿದ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸೊಪ್ಪು, ತರಕಾರಿ ರೈತರ ಜಮೀನಿನಲ್ಲೇ ಕೊಳ್ಳುತ್ತಿವೆ. ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆಯಾಗದೆ ಬೆಲೆ ದುಪ್ಪಟ್ಟಾಗಿದೆ.

ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ಎಲ್ಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ದುಪ್ಪಟ್ಟಾಗಿದೆ.

ತರಕಾರಿ ಬೆಲೆ ಹೀಗಿದೆ:
ತರಕಾರಿ ದರ
ಬೆಳ್ಳುಳ್ಳಿ 132 ರೂ.
ಟೊಮೇಟೊ 103 ರೂ.
ದಪ್ಪ ಮೆಣಸಿನಕಾಯಿ 128ರೂ
ಹಸಿ ಮೆಣಸಿನಕಾಯಿ 60 ರೂ
ಕ್ಯಾರೆಟ್ 94 ರೂ
ಹುರಳೀಕಾಯಿ(ಬೀನ್ಸ್) 94 ರೂ
ಬದನೆಕಾಯಿ 108 ರೂ
ಸೌತೆಕಾಯಿ 24 ರೂ
ನುಗ್ಗೆ ಕಾಯಿ 270 ರೂ
ಶುಂಠಿ 84 ರೂ
ಈರುಳ್ಳಿ ( ಮಧ್ಯಮ) 53 ರೂ
ಸಾಂಬರ್ ಈರುಳ್ಳಿ 56 ರೂ
ಆಲೂಗಡ್ಡೆ 44 ರೂ.
ಮೂಲಂಗಿ 70 ರೂ
ಕೊತ್ತಂಬರಿ ಸೊಪ್ಪು 86 ರೂ
ಮೆಂತ್ಯ ಸೊಪ್ಪು 128 ರೂ.
ಪಾಲಕ್ ಸೊಪ್ಪು 107 ರೂ.
ಸಬ್ಬಕ್ಕಿ ಸೊಪ್ಪು 70 ರೂ.
ಕರಿಬೇವು 67 ರೂ.
ದಂಟಿನ ಸೊಪ್ಪು 114 ರೂ.
ತೆಂಗಿನಕಾಯಿ( ದಪ್ಪ) 32 ರೂ.
ತೆಂಗಿನಕಾಯಿ(ಮಧ್ಯಮ)28 ರೂ.
ತೆಂಗಿನ ಕಾಯಿ (ಸಣ್ಣ) 22 ರೂ.
ರಾಜ್ಯದ ನಾನಾ ಕಡೆ ಸುರಿದ ಭಾರಿ ಮಳೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಕೊಯ್ಲುಗೆ ಬಂದ ಬೆಳೆ ಮಳೆಗೆ ಹಾನಿಯಾಗಿರುವುದರಿಂದ ಭಾರೀ ನಷ್ಟ ಸಂಭವಿಸಿದೆ. ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೆ ಕೊಳೆಯುವಂತಾಗಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments