ಕರೋನಾ ಸಂಕಷ್ಟದ ನಡುವೆ ಜನಸಾಮಾನ್ಯರಿಗೆ ತರಕಾರಿ ಶಾಕ್ .!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ17, ಮಹಾಮಾರಿ ಕರೋನಾದಿಂದ ಜನತೆ ತತ್ತರಿಸಿದ್ದು ಜಿವನ ನಿರ್ವಹಣೆ ಕಷ್ಟಸಾಧ್ಯವಾಗಿರುವ ಬೆನ್ನಲ್ಲೆ ತರಕಾರಿ ಬೆಲೆ ಏರಿಕೆ ಮತ್ತಷ್ಟು ಬಿಸಿಮುಟ್ಟಿಸಿದೆ.

ರಾಜಧಾನಿ ಬೆಂಗಳೂರಿನಲ್ಲೆ ಕಳೆದ ಹದಿನೈದು ದಿನದಿಂದ ಏರುತ್ತಿರುವ ತರಕಾರಿಗಳ ಬೆಲೆಯಿಂದ ಗ್ರಾಹಕರು ಸುಸ್ತಾಗಿ ಹೋಗಿದ್ದಾರೆ, ಬೆಲೆನೋಡಿದರೆ ತರಕಾರಿ ತಿನ್ನುವುದೆ ಬೆಡ ಅನ್ನುವ ಮಟ್ಟಕ್ಕೆ ಕೆಲವರು ಬಂದಿದ್ದಾರೆ.

ಆದರೆ ಕೆಲತರಕಾರಿಗಳು ಇಲ್ಲದಿದ್ದರೆ ಅಡುಗೆ ಪೂರ್ಣವಾಗುವುದಿಲ್ಲ ಎಷ್ಟಾದರೂ ಸರಿಯೇ ಕೊಂಡು ತಿನ್ನಲೇಬೇಕು, ಕರೋನಾ ಹೊಡೆತದಿಂದ ಬಹುತೇಕ ಮಂದಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ, ಇದರಿಂದ ಈ ಭಾರಿ ಉತ್ತಮ ಫಸಲನ್ನು ನೀರಿಕ್ಷಿಸಲಾಗಿದೆ, ಆದರೆ ರಾಜ್ಯದ ವಿವಿದೆಡೆ ಸುರಿಯುತ್ತಿರುವ ಭಾರಿಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ತರಕಾರಿ ಬೆಳೆಮೇಲೆ ವ್ಯಾಪಕ ಪರಿಣಾಮ ಬೀರಿದೆ,

ರಾಯಚೂರು, ಬಳ್ಳಾರಿ, ಬೀದರ್, ಸೇರಿದಂತೆ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ಭಾಗಗಳಲ್ಲಿ ಮಳೆಹೆಚ್ಚಾಗಿ ಬಿಳುತ್ತಿರುವ À ಕಾರಣ ಬೆಳೆ ಕೊಳೆಯುತ್ತಿದೆ ಹಾಗಾಗಿ ನೂರು ರೂಪಾಯಿಗೆ 5 ರಿಂದ 6 ಕೆ,ಜಿ ಸಿಗುತ್ತಿದ್ದ ಈರುಳ್ಳಿ ಇವಾಗ 2 ರಿಂದ ಮೂರು ಕೆ,ಜಿ ಗೆ ಬಂದಿದೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ,

ಟೊಮ್ಯಾಟೋ ಇಲ್ಲದೆ ಯಾವ ಅಡುಗೆಯೂ ಸಹ ರುಚಿನೀಡುವುದಿಲ್ಲ ಯಾವಾಗಲೂ ಕಡಿಮೆ ಬೆಲೆಯಿರುತ್ತಿದ್ದ ಟಮ್ಯೋಟೋ ಇವಾಗ ಆಪಲ್ ಬೆಲೆಯಾಗಿದೆ ದಿಢೀರನೆ 40 ರಿಂದ 60 ರೂಪಾಯಿಆಗಿಬಿಟ್ಟಿದೆ ಕಾರಣ ಮೋಡಕವಿದ ವಾತವರಣ,ನಗರದಲ್ಲಿ ಪ್ರತಿ ಕೆಜಿಗೆ ಹುರುಳಿಕಾಯಿ.80.ರೂ ಮೆಣಸಿನಕಾಯಿ,60 ಬೆಂಡೆಕಾಯಿ50, ಕ್ಯಾರೆಟ್80 ಮೂಲಂಗಿ 40 , ಸೌತೆಕಾಯಿ 40, ಆಲೂಗೆಡ್ಡೆ 40, ರೂಗೆ ಮಾರಾಟವಾಗುತ್ತಿವೆ ಇದರಿಂದ ಗ್ರಾಹಕರ ಜೇಬಿಗೆ ಕತ್ತರಿಬೀಳುತ್ತಿದೆ

Facebook Comments