ಆರೋಪಿ ಕರೆದೊಯ್ಯುತ್ತಿದ್ದ ಪೊಲೀಸ್ ವಾಹನ ಅಪಘಾತ
ಬೆಂಗಳೂರು, ನ.25- ವಿಚಾರಣೆಗಾಗಿ ಆರೋಪಿಯನ್ನು ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರಿದ್ದ ವಾಹನ ದಾವಣಗೆರೆ ಬಳಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸರು ಇನ್ನೋವಾ ಕಾರಿನಲ್ಲಿ ಆರೋಪಿ ಯನ್ನು ವಿಚಾರಣೆ ಗಾಗಿ ಬೆಳಗಾವಿಗೆ ಕರೆದೊಯ್ಯುತ್ತಿದ್ದರು.
ಕಾರಿನಲ್ಲಿ ಒಬ್ಬರು ಮಹಿಳಾ ಪಿಎಸ್ಐ, ಒಬ್ಬರು ಹೆಡ್ಕಾನ್ಸ್ಟೆಬಲ್, ಇಬ್ಬರು ಕಾನ್ಸ್ಟೆಬಲ್, ಚಾಲಕ ಮತ್ತು ಆರೋಪಿ ಸೇರಿ ಆರು ಮಂದಿ ಹೋಗುತ್ತಿದ್ದರು. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಹನಗವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಬಳಿ ಬೆಳಗಿನ ಜಾವ 4.15ರ ಸುಮಾರಿನಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತವಾಗಿದೆ.
ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ದಾವಣಗೆರೆಯ ಎಸ್ಎಸ್ ಐಟೆಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ನಡೆದ ವಿಶೇಷ ಮೀಸಲು ಪೆÇಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ನಕಲಿ ಅಭ್ಯರ್ಥಿ ಮಲ್ಲಿಕಾರ್ಜುನ ಎಂಬಾತನನ್ನು ಮಾಗಡಿ ರಸ್ತೆ ಪೆÇಲೀಸರು ಬಂಸಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಆರೋಪಿಯನ್ನು ಕರೆದೊಯ್ಯುತ್ತಿ ದ್ದಾಗ ಈ ಅಪಘಾತ ಸಂಭವಿಸಿದೆ.