ನಿಮ್ಮ ವಾಹನಗಳ ಆರ್‌ಸಿ ಹಾಗೂ ಇನ್ಸುರೆನ್ಸ್ ನಕಲಿಯಾಗಿರಬಹುದು ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.3- ನಿಮ್ಮ ವಾಹನಗಳ ಆರ್‍ಸಿ ಬುಕ್ ಅಸಲಿಯೇ? ನೀವು ಪಾವತಿಸುವ ವಾಹನ ತೆರಿಗೆ ನಕಲಿಯೇ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ. ಏಕೆಂದರೆ, ನಕಲಿ ಆರ್‍ಸಿ ಮತ್ತು ಇನ್ಸುರೆನ್ಸ್ ಮಾಡಿಕೊಡುವ ಖದೀಮರಿದ್ದಾರೆ ಎಚ್ಚರ..!

ಕೇವಲ 3000ರೂ.ಗಳಿಗೆ ನಕಲಿ ಆರ್‍ಸಿ ಕಾರ್ಡ್ ಮಾಡಿಕೊಡುವ ಹಾಗೂ 500 ರಿಂದ 1000ರೂ.ಗೆ ನಕಲಿ ಇನ್ಸೂರೆನ್ಸ್ ಮಾಡಿಕೊಡುತ್ತಿದ್ದ ಈ ಖದೀಮರು ಇದೀಗ ಸಿಸಿಬಿ ಪೆÇಲೀಸರ ಬಲೆಗೆ ಬಿದ್ದಿದ್ದಾರೆ.

ಆರ್‍ಟಿಒ ಕಚೇರಿಯಲ್ಲಿ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಕೆಪಿ ಅಗ್ರಹಾರದ ಸಂತೋಷ (20) ಹಾಗೂ ಪೀಣ್ಯದ ಶ್ರೀಧರ (29) ಪೆÇಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು. ಬ್ರೋಕರ್ ಆಗಿದ್ದ ಸಂತೋಷ ಡಿಆರ್‍ಸಿ ಆದ ಸ್ಮಾರ್ಟ್ ಕಾರ್ಡ್‍ಗಳನ್ನು ಆರ್‍ಟಿಒ ಕಚೇರಿಯಿಂದ ಕಳ್ಳತನ ಮಾಡಿ ಮತ್ತೊಬ್ಬ ಆರೋಪಿ ಶ್ರೀಧರ್‍ಗೆ ತಂದುಕೊಡುತ್ತಿದ್ದ.

ಶ್ರೀಧರ್ ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಪ್ರಿಂಟ್ ಆಗಿರುವಂತಹ ಮೂಲ ಮಾಲೀಕರ ಹೆಸರನ್ನು ತಿನ್ನರ್‍ನಿಂದ ಅಳಿಸಿ ರೀ ಪ್ರಿಂಟ್ ಮಾಡಿ ನಕಲಿ ಆರ್‍ಸಿ ಕಾರ್ಡ್‍ಅನ್ನು ತಯಾರಿಸುತ್ತಿದ್ದ. ಅದೇ ರೀತಿ ನಕಲಿ ಇನ್ಸೂರೆನ್ಸ್‍ಅನ್ನು ಸೃಷ್ಟಿಸುತ್ತಿದ್ದ.

ಬಂದ ಖಚಿತ ಮಾಹಿತಿ ಮೇರೆಗೆ ಕಳೆದ ಜೂ.1ರಂದು ಆರೋಪಿಗಳನ್ನು ಬಂಸಿ ವಿಚಾರಣೆಗೊಳಪಡಿಸಿದಾಗ ಇದುವರೆಗೂ 135 ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ನಕಲಿ ಆರ್‍ಸಿ ಕಾರ್ಡ್ ತಯಾರಿಸಿ 3 ರಿಂದ 4 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ತಮ್ಮ ಕೈಚಳಕ ಬಳಸಿ ತಯಾರಿಸುತ್ತಿದ್ದ ನಕಲಿ ಇನ್ಸೂರೆನ್ಸ್‍ಗಳನ್ನು ಈ ಖದೀಮರು 500 ರಿಂದ 1000ರೂ.ಗಳಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ಸಿಸಿಬಿ ಡಿಸಿಪಿ ಕುಲ್‍ದೀಪ್‍ಕುಮಾರ್ ಜೈನ್ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಆರ್.ಮುದವಿ, ಇನ್ಸ್‍ಪೆಕ್ಟರ್‍ಗಳಾದ ಹಜರೇಶ್ ಕಿಲ್ಲೇದಾರ್, ತಿಮ್ಮೇಗೌಡ ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

Facebook Comments

Sri Raghav

Admin