ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ, 1.62 ಕೋಟಿ ಮೌಲ್ಯದ ವಾಹನಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ. 27- ಮಡಿವಾಳ ಮತ್ತು ಎಲೆಕ್ಟ್ರಾನಿಕ್‍ಸಿಟಿ ಉಪ ವಿಭಾಗಗಳಲ್ಲಿ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜ್ಯ ಮತ್ತು ಅಂತರ ರಾಜ್ಯದ ಒಟ್ಟು 39 ಆರೋಪಿಗಳನ್ನು ಬಂಧಿಸಿ, ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 139 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತಂಡಗಳು ಯಶಸ್ವಿಯಾಗಿವೆ.

ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರ  ಆದೇಶದಂತೆ, ಆಗ್ನೇಯ ವಿಭಾಗದಲ್ಲಿ ಕಳ್ಳತನವಾದ ವಾಹನಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಸಿ, ಸುಮಾರು 1.62 ಕೋಟಿ ಮೌಲ್ಯದ ಒಟ್ಟು 174 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

139 ಪ್ರಕರಣಗಳಲ್ಲಿ, ಹೆಚ್.ಎಸ್.ಆರ್ ಲೇಔಟ್ ಪೊಲೀಸರು-33, ಆಡುಗೋಡಿ ಪೊಲೀಸರು-13, ಕೋರಮಂಗಲ ಪೊಲೀಸರು-04, ಬಂಡೇಪಾಳ್ಯ ಪೊಲೀಸರು-34, ಬೇಗೂರು ಪೊಲೀಸರು-35, ಹುಳಿಮಾವು ಪೊಲೀಸರು-13, ಪರಪ್ಪನ ಅಗ್ರಹಾರ ಪೊಲೀಸರು-03 ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು-04 ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ.

Facebook Comments