ವೆಂಟಿಲೇಟರ್ ಖರೀದಿಯಲ್ಲೂ ದೊಡ್ಡ ಹಗರಣ, ಸರ್ಕಾರದ ಬೊಕ್ಕಸಕ್ಕೆ 9.38 ಕೋಟಿ ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.10- ಕರೊನಾ ಉಪಕರಣ ಹಾಗೂ ಔಷಧ ಸಾಮಗ್ರಿಯಲ್ಲಿ ಒಂದೊಂದೇ ಅಕ್ರಮಗಳ ಸರಮಾಲೆಗಳೇ ಹೊರಬೀಳುತ್ತಿವೆ. ಕೋಟೇಷನ್ ಗೊಲ್ಮಾಲï, ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ನಾಸಲ್ ಕ್ಯಾನ್ಯುಲ್ ಥೆರಪಿ ಡಿವೈಸ್ ಅವ್ಯವಹಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವುಂಟಾಗಿರುವ ಬೆನ್ನಲ್ಲೇ ಇದೀಗ ವೆಂಟಿಲೇಟರ್‍ಗಳ ಖರೀದಿಯಲ್ಲಿಯೂ ದೊಡ್ಡ ಹಗರಣ ನಡೆದಿದೆ.

ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್‍ಹೌಸಿಂಗ್ ಸೊಸೈಟಿ (ಕೆಡಿಎಲ್ಡಬ್ಲ್ಯುಎಸ) ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ವೆಂಟಿಲೇಟರ್ ಖರೀದಿಸಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 9.38 ಕೋಟಿ ರೂ. ನಷ್ಟವುಂಟಾಗಿದೆ.

ನೆರೆಯ ತಮಿಳನಾಡು ಸರ್ಕಾರ ಪ್ರತಿ ವೆಂಟಿಲೇಟರ್ 4.78 ಲಕ್ಷ ರೂ. ನಂತೆ 100 ವೆಂಟಿಲೇಟರ್ ಖರೀದಿಸಿದೆ.

ಇಂತಹ ಸಂದರ್ಭದಲ್ಲಿ ಕೆಡಿಎಲ್ಡಬ್ಲ್ಯುಎಸ್ ಅಕಾರಿಗಳು ಕಮಿಷನ್ ಆಸೆಗಾಗಿ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ವಿಧ ವೆಂಟಿಲೇಟರ್‍ಗಳಿಗೆ 5.6 ಲಕ್ಷ ರೂ.ನಿಂದ ಹಿಡಿದು 18.2 ಲಕ್ಷ ರೂ.ವರೆಗೆ 15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಿಲೇಟರ್ ಖರೀದಿ ಸಿದೆ ಎಂದು ಆರೋಪಗಳು ಕೇಳಿ ಬಂದಿವೆ. ಕೊನೆಗೆ ಎಚ್ಚೆತ್ತ ಆರೋಗ್ಯ ಇಲಾಖೆ ಆದೇಶವನ್ನು ರದ್ದುಪಡಿಸಿದೆ.

Facebook Comments

Sri Raghav

Admin