BREAKING : ಖಾತ್ಯ ತೆಲುಗು ಹಾಸ್ಯ ನಟ ವೇಣು ಮಾಧವ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಕಂದರಾಬಾದ್, ಸೆ.25- ತೆಲುಗು ಚಿತ್ರರಂಗದ ಖಾತ್ಯ ಹಾಸ್ಯನಟ ವೇಣುಮಾಧವ (39) ಇನ್ನಿಲ್ಲ. ಸಿಕಂದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 12.21ರಲ್ಲಿ ಕೊನೆಯುಸಿರೆಳೆದರು. ಕೆಲ ಕಾಲದಿಂದ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.

ಸೆ. 24ರಂದು ಅವರ ಆರೋಗ್ಯ ತೀವ್ರ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್ ಚಿಕಿತ್ಸೆಗೆ ಒಳಗಾಗಿದ್ದರು.  ಕೆಲವು ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಹಾಸ್ಯನಟನ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದರು. ತೆಲುಗುದೇಶಂ ಪಕ್ಷದ ಪರ ಚುನಾವಣೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದ ಇವರು ರಾಜಕೀಯ ಪ್ರವೇಶಿಸಲು ಉತ್ಸುಕರಾಗಿದ್ದರು.

ಮಿಮಿಕ್ರಿ ನಟನಾಗಿದ್ದ ಚಿರಂಜೀವಿಯವರ ‘ಮಾಸ್ಟರ್’ ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ವೇಣುಮಾಧವ್ ನಂತರ ಅನೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡರು. ಸುಮಾರು 170 ಸಿನಿಮಾಗಳಿಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. 1996 ರಲ್ಲಿ ಸಿನಿರಂಗ ಪ್ರವೇಶಿಸಿದ ಅವರು 2016 ರಲ್ಲಿ ಪರಮಾನಂದಯ್ಯ ಸ್ಟುಡೆಂಟ್ಸ್ ಅವರು ಅಭಿನಯಿಸಿದ ಕೊನೆಯ ಚಿತ್ರ .

ಸತತವಾಗಿ ಅನಾರೋಗ್ಯ ಕಾಡಿದ ಕಾರಣ ಅವರು ಚಿತ್ರಗಳನ್ನು ನಟಿಸುವುದು ನಿಲ್ಲಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ತೆಲಂಗಾಣದ ಕೋಡದ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರವನ್ನೂ ಸಲ್ಲಿಸಿದ್ದರು.  ವೇಣುಮಾಧವ್ ಪತ್ನಿ ಶ್ರೀ ವಾಣಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಡಪ ಜಿಲ್ಲೆಯ ಸೂರ್ಯ ಪೇಟೆ ಇವರು ಹುಟ್ಟೂರು.

Facebook Comments