ಶುಕ್ರ ಗ್ರಹದಲ್ಲಿವೆಯಂತೆ ಏಲಿಯನ್ಸ್..! ಇಂದು ವಿಜ್ಞಾನಿಗಳೇ ಹೇಳಿದ ಸತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಸೆ.16- ಸೌರಮಂಡಲದಅತ್ಯಂತ ಪ್ರಕಾಶಮಾನ ಶುಕ್ರಗ್ರಹದಲ್ಲಿ ಏಲಿಯನ್ (ಅನ್ಯಗ್ರಹ ಜೀವಿಗಳು) ವಾಸ ಸಾಧ್ಯತೆ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿದೆ.  ಭೂಮಿಗೆ ಅತ್ಯಂತ ಸನಿಹದ ವೀನಸ್‍ಗ್ರಹದ ಮೇಲ್ಮೈ ಮೇಲಿರುವ ಮೋಡಗಳಲ್ಲಿ ಫಾಸ್ಫೈನ್ ಎಂಬ ರಾಸಾಯನಿಕಕಣವನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇಂಥ ಕಣಗಳು ಜೀವಿಗಳಿಂದ ಮಾತ್ರಉತ್ಪಾದಿಸಲು ಸಾಧ್ಯಅಥವಾ ಜೀವಿಗಳು ಇರುವಕಡೆ ಮಾತ್ರ ಫಾಸ್ಪೈನ್‍ಕಂಡುಬರುತ್ತದೆಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಹೊಸ ಸಂಶೋಧನೆಯಿಂದ ವೀನಸ್‍ನಲ್ಲಿ ಅನ್ಯಗ್ರಹ ಜೀವಿಗಳ ವಾಸ ಸಾಧ್ಯತೆ ಬಗ್ಗೆ ಮತ್ತಷ್ಟು ಮಹತ್ವದ ಸಂಶೋಧನೆ ನಡೆಸಲುಉತ್ತೇಜನ ಲಭಿಸಿದೆ. ಶುಕ್ರಗ್ರಹದ ವಾತಾವರಣದಲ್ಲಿ ಜೀವಿಗಳು ವಾಸಕ್ಕೆ ಪೂರಕವಾದ ವಾತಾವರಣ ಇದೆ ಎಂದು ಈ ಹಿಂದೆತಾರಾಲಯ ವೀಕ್ಷಣೆ ಮತ್ತು ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳು ಹೇಳಿದ್ದರು.

ಇನ್ನೂ ಕೆಲವು ಸಂಶೋಧಕರು ವೀನಸ್ ಮೇಲ್ಮೈ ಮೇಲಿನ ವಾತಾವರಣ ಜೀವಿಗಳ ವಾಸಕ್ಕೆ ಕಷ್ಟಸಾಧ್ಯ. ಏಕೆಂದರೆಅಲ್ಲಿ 800 ಡಿಗ್ರಿ ಫ್ಯಾರೆನ್ ಹಿಟ್ ಉಷ್ಣಾಂಶ ಇರುತ್ತದೆ. ಹೀಗಾಗಿ ಅಲ್ಲಿ ಬಹುತೇಕ ಜೀವಿಗಳು ಕೆಲವು ಗಂಟೆಗಳ ಮಾತ್ರ ವಾಸಿಸಲು ಸಾಧ್ಯವಾಗುತ್ತದೆಎಂದು ತಿಳಿಸಿದ್ದರು.

ಈಗ ಶುಕ್ರಗ್ರಹದ ಮೇಲ್ಮೈನ ಮೋಡಗಳಲ್ಲಿ ಫಾಸ್ಪೈನ್ ಕಣಗಳು ಪತ್ತೆಯಾಗಿದ್ದು, ಇದುಯಾವುದೇ ಪ್ರಬಲ ಜೀವಿಗಳ ವಾಸ ಸಾಧ್ಯತೆ ವಾದಕ್ಕೆ ಪುಷ್ಟಿ ನೀಡಿದೆ. ಅನ್ಯಗ್ರಹ ಜೀವಿಗಳೂ ಸಹ ಇಲ್ಲಿ ವಾಸಿಸುತ್ತಿರುವ ಸಾಧ್ಯತೆಗಳಿವೆ ಎಂಬ ಅಂಶದ ಬಗ್ಗೆ ಈಗ ಮತ್ತಷ್ಟುಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಲು ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿದೆ.

ಇಂಗ್ಲೆಂಡ್‍ನ ವೇಲ್ಸ್‍ನಕಾರ್ಡಿಫ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶುಕ್ರನ ಮೇಲ್ಮೈ ಮೇಲೆ ಜೀವಿಗಳ ವಾಸ ಸಾಧ್ಯತೆ ಬಗ್ಗೆ ಹೊಸ ಬೆಳಕು ಚೆಲ್ಲಿರುವುದು ಮಹತ್ವದ ಸಂಗತಿಯಾಗಿದೆ.  ಸೌರಮಂಡಲದಲ್ಲಿಚಂದಿರನ ನಂತರ ಶುಕ್ರಅತ್ಯಂತ ಪ್ರಕಾಶಮಾನಗ್ರಹ. ರಾತ್ರಿ ವೇಳೆ ಭೂಮಿಗೆತೀರಾ ಸಮೀಪದಲ್ಲಿಕಂಡುಬರುವ ಶುಕ್ರ ಬಾನಂಗಳದಲ್ಲಿ ಪುಟ್ಟ ವಜ್ರದಂತೆ ಹೊಳೆಯುತ್ತದೆ.

ಚಂದ್ರ ಭೂಮಿಯ ಸ್ವಾಭಾವಿಕಗ್ರಹ. ಶುಕ್ರಗ್ರಹಧರೆಗೆ ಹತ್ತಿರದಲ್ಲಿರುವುದರಿಂದಅತ್ಯಂತದೇದೀಪ್ಯಮಾನವಾಗಿ ಕಂಗೊಳಿಸುತ್ತದೆ. ಅಲ್ಲದೇ ಸೌರಮಂಡಲದಲ್ಲಿ ಬೇರಾವ ಗ್ರಹಗಳು ಪ್ರತಿಫಲಿಸದಷ್ಟು ಬೆಳಕನ್ನು ವೀನಸ್ ಪ್ರತಿಬಿಂಬಿಸುತ್ತದೆ. ಶನಿಗ್ರಹವುತನ್ನ ಸುತ್ತಉಂಗುರದೊಂದಿಗೆ ಗಮನಸೆಳೆದರೆ, ಶುಕ್ರಉಜ್ವಲವಾಗಿ ಬೆಳಗುತ್ತ ಆಕರ್ಷಿಸುತ್ತದೆ.

Facebook Comments