ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ,ಅ.12- ದಾದಾ ಸಾಹೇಬ್ ಫಾಲ್ಕೆ ವಿಜೇತ , ಬಂಗಾಲಿ ಚಿತ್ರರಂಗದ ಹಿರಿಯ ನಟ ಸೌಮಿತ್ರಾ ಚಟರ್ಜಿ (85) ಆರೋಗ್ಯದ ಸ್ಥಿತಿ ಗಂಭೀರ ವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಚಟರ್ಜಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಅವರ ಆರೋಗ್ಯದಲ್ಲಿ ಮತ್ತಷ್ಟು ಏರಿಳಿತ ಉಂಟಾಗಿತ್ತು, ಕಳೆದ ರಾತ್ರಿ ಅವರ ಆರೋಗ್ಯದಲ್ಲಿ ಮತ್ತಷ್ಟು ವಿಷಮವಾಗಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗೆ ಅವರ ಜೀವನಚರಿತ್ರೆ ಆಧಾರಿಸಿದ `ಅಭಿಜಾನ್’ ಎಂಬ ಡಾಕ್ಯೂಮೆಂಟರಿಯನ್ನು ಚಿತ್ರೀಕರಿಸಲಾಗಿತ್ತು. ಸತ್ಯಜಿತ್ ಅವರ `ಅಪುರ್‍ಸಂಸರ್’ (1959)ದಿಂದ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟ ಚಟರ್ಜಿ `ಆಕಾಶ್ ಕುಸುಮ್’, `ಚಾರುಲತಾ’, `ತಪನ್ ಸಿನ್ಹಾ’ ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಹಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

ಸೌಮಿತ್ರಾ ಚಟರ್ಜಿ ಕಲಾ ಪ್ರಪಂಚದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ 2004ರಲ್ಲಿ ಪದ್ಮಭೂಷಣ, 2012ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2018ರಲ್ಲಿ ಫ್ರಾನ್ಸ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಲಭಿಸಿವೆ.

Facebook Comments

Sri Raghav

Admin