ಬಾಲಿವುಡ್ ಹಿರಿಯ ನಟ ಜಗದೀಪ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜುಲೈ.9 : 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಜಗದೀಪ್(81) ಅವರು ನಿಧನರಾಗಿದ್ದಾರೆ.

ಶೋಲೆ ಚಿತ್ರದ ‘ಸೂರ್ಯ ಭೋಪಾಲಿ’ ಪಾತ್ರದಲ್ಲಿ ಜನಪ್ರಿಯರಾದ ಜಗದೀಪ್ , ಪುರಾಣ ಮಂದಿರ (1984), ಆಂದಾಜ್ ಅಪ್ನಾ ಅಪ್ನಾ (1994) ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಒಂದು ಚಿತ್ರವನ್ನು ತಾವೇ ನಿರ್ದೇಶಿಸಿ, ನಟಿಸಿದ್ದಾರೆ.

ಬಿ.ಆರ್. ಚೋಪ್ರಾ ಅವರ ಅಫ್ಸಾನಾ ಚಿತ್ರದಲ್ಲಿ ಬಾಲ ಕಲಾವಿದರಾಗಿ ತಮ್ಮ ಸಿನಿಮಾ ಜೀವನ ಪ್ರಾರಂಭಿಸಿದ ಇವರು ಬ್ರಹ್ಮಚಾರಿ ಚಿತ್ರದಿಂದ ಹಾಸ್ಯನಟರಾಗಿ ತಮ್ಮನ್ನು ಗುರುತಿಸಿಕೊಂಡರು.

ಪುರಾಣ ಮಂದಿರ ಮತ್ತು 3 ಡಿ ಸಾಮ್ರಿಯಂತಹ ಪ್ರಸಿದ್ಧ ಹಿಟ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೈದೀಪ್ ಅವರಿಗೆ ಬಾಲಿವುಡ್ ನಟ ಜಾವೇದ್ ಜಾಫೆರಿ ಮತ್ತು ಟೆಲಿವಿಷನ್ ನಿರ್ಮಾಪಕ / ನಿರ್ದೇಶಕ ನವೇದ್ ಜಾಫ್ರಿ ಪುತ್ರರೂ, ಮಗಳು ಮುಸ್ಕಾನ್ ಜಾಫ್ರಿ ಅವರನ್ನು ಅಗಲಿದ್ದಾರೆ.

Facebook Comments

Sri Raghav

Admin