ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ. 18- ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಪೋಷಕ ನಟಿ ಕಿಶೋರ್ ಬಲ್ಲಾಳ್ ಅವರ ಇಂದು ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಇಹಲೋಕ ಯಾತ್ರೆಯನ್ನ ಮುಗಿಸಿದ್ದಾರೆ.ಇವಳೆಂಥಾ ಹೆಂಡ್ತಿ ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಿಶೋರಿ ಬಲ್ಲಾಳ್ ಅವರು ಕನ್ನಡ, ತೆಲುಗು, ಹಿಂದಿ ಸೇರಿದಂತೆ 72 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್‍ನ ಬಾದ್‍ಷಾ ಷಾರುಖ್‍ಖಾನ್ ಅಭಿನಯದ ಸ್ವದೇಶದಲ್ಲಿ ನಟಿಸಿದ್ದ ಕಿಶೋರಿ ಬಲ್ಲಾಳ್ ಮಹದೇವ ಮಾಚಿ ದೇವ ಚಿತ್ರದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ದ ಕಿಶೋರಿ ಬಲ್ಲಾಳ್ ಅಮೃತವರ್ಷಿಣಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಅಯ್ಯ, ಕೆಂಪೇಗೌಡ, ನಮ್ಮಣ್ಣ, ಗೇರ್ ಕಾನೂನಿ ಮುಂತಾದ ಚಿತ್ರಗಳಲ್ಲಿ ಕಿಶೋರಿ ಬಲ್ಲಾಳ್ ನಟಿಸಿದ್ದಾರೆ.

ಕಿಶೋರಿ ಬಲ್ಲಾಳ್ ಅವರ ಅಭಿನಯವನ್ನು ಗುರಿತಿಸಿ ಕೆಂಪೇಗೌಡ ಪ್ರಶಸ್ತಿ, ಕನ್ನಡ ಅಕಾಡೆಮಿ ಪ್ರಶಸ್ತಿ, ಸ್ವದೇಶಿ ಚಿತ್ರದಲ್ಲಿನ ನಟನೆಗಾಗಿ ಐಫಾ ಪ್ರಶಸ್ತಿಗೂ ಭಾಜನರಾಗಿದ್ದರು. ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ದರ್ಶನ್, ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಾಯಕನಟರ ಚಿತ್ರಗಳಲ್ಲಿ ಅಮ್ಮ, ಅಜ್ಜಿ ಪಾತ್ರವನ್ನು ನಿರ್ವಹಿಸಿದ್ದ ಕಿಶೋರಿಬಲ್ಲಾಳ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷ ಜಯರಾಜ್ ಸೇರಿದಂತೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin