ಪಶು ವೈದ್ಯಾಕಾರಿ ಕೊರೊನಾಗೆ ಸಾವು..

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ,ಏ.23- ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶುವೈದ್ಯ ಇಲಾಖೆ ಮುಖ್ಯಾಕಾರಿ ಲಿಂಗರಾಜಯ್ಯ (55) ಸಾವನ್ನಪ್ಪಿದ್ದಾರೆ. ಮೂಲತಃ ಚನ್ನಪಟ್ಟಣ ತಾಲ್ಲೂಕಿನವರಾಗಿದ್ದರೂ ಸಹ ಕನಕಪುರ ತಾಲ್ಲೂಕಿನಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಲಿಂಗರಾಜಯ್ಯ ಅವರು ನಂತರ ಪಶುವೈದ್ಯ ಇಲಾಖೆಯಲ್ಲಿ ಮುಖ್ಯಾಕಾರಿಯಗಿ ಕರ್ತವ್ಯ ಮುಂದುವರೆಸಿದ್ದರು.

ಕಳೆದ ಒಂದು ವಾರದಿಂದ ತೀವ್ರ ನಿಶಕ್ತಿ, ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಲಿಂಗರಾಜಯ್ಯ ಅವರನ್ನು ಬೆಂಗಳೂರಿನ ಪೊರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಲಿಂಗರಾಜಯ್ಯ ನಿಧನಕ್ಕೆ ಪಶುವೈದ್ಯಇಲಾಖೆ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

Facebook Comments