‘ಹೌ ಇಸ್ ದಿ ಜೋಷ್’ ಎಂದಿದ್ದ ನಟ ವಿಕ್ಕಿಗೆ ಶೂಟಿಂಗ್ ವೇಳೆ ಗಂಭೀರ ಗಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಗುಜರಾತ್, ಏ.20- ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಉರಿ ಚಿತ್ರದಲ್ಲಿ ‘ಹೌ ಇಸ್ ದಿ ಜೋಷ್’ ಎಂಬ ಡೈಲಾಗ್ ಹೊಡೆಯುವ ಮೂಲಕ ಬಾಲಿವುಡ್‍ನಲ್ಲಿ ಲೈಮ್‍ಲೈಟ್‍ಗೆ ಬಂದಿರುವ ನಟ ವಿಕ್ಕಿ ಕೌಶಾಲ್‍ಗೆ ಶೂಟಿಂಗ್ ವೇಳೆ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬನುಪ್ರತಾಪ್ ಸಿಂಗ್ ನಿರ್ದೇಶಿಸುತ್ತಿರುವ ಚಿತ್ರದ ಚಿತ್ರೀಕರಣವು ಗುಜರಾತ್‍ನಲ್ಲಿ ನಡೆಯುತ್ತಿದ್ದು ಸಾಹಸ ದೃಶ್ಯವನ್ನು ತೆಗೆಯುವ ವೇಳೆ ಆಯ ತಪ್ಪಿ ಬಿದ್ದ ವಿಕ್ಕಿಯ ಕೆನ್ನೆಯ ಮೂಳೆಗೆ ಗಂಭೀರ ಗಾಯವಾಗಿದ್ದು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾರೆ.

ಗಾಯದ ಸಮಸ್ಯೆ ಗಂಭೀರ ವಾಗಿರುವುದರಿಂದ ವಿಕ್ಕಿಯ ಕೆನ್ನೆಗೆ 13 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬಾಲಿವುಡ್ ನಟ ವಿಕ್ಕಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ವಿಷಯ ಹರಡುತ್ತಿದಂತೆ ಆತನನ್ನು ನೋಡಲು ಆತನ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಶೂಟಿಂಗ್ ವೇಳೆ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಇತ್ತೀಚೆಗೆ ಕನ್ನಡದ ರಣಂ ಚಿತ್ರದ ಶೂಟಿಂಗ್ ವೇಳೆ ಇಬ್ಬರು ಜೀವÀವನ್ನು ಕಳೆದುಕೊಳ್ಳುವಂತಾಗಿತ್ತು.

Facebook Comments