ಮತ್ತೆ ಹೇಳಿಕೆ ನೀಡಲು ಬಂದ ಯುವತಿ, ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12- ಸಿಡಿ ಪ್ರಕರಣ ಹೊಸ ತಿರುವು ಪಡೆದಿದ್ದು, ಸಂತ್ರಸ್ತ ಯುವತಿ ಇಂದು ವಿಶೇಷ ತನಿಖಾ ದಳದ ಮುಂದೆ ಹಾಜರಾಗಿ ಮತ್ತೊಮ್ಮೆ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.ಈ ಹಿಂದೆ ಆರು ದಿನಗಳ ಕಾಲ ಬಿಗಿ ಭದ್ರತೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ತಮಗೆ ಅನ್ಯಾಯವಾಗಿದೆ. ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.

ಆದರೆ, ಇಂದು ಖುದ್ದಾಗಿ ತನಿಖಾಕಾರಿಗಳಿಗೆ ಕರೆ ಮಾಡಿರುವ ಯುವತಿ, ಹೊಸದಾಗಿ ಹೇಳಿಕೆ ನೀಡಲು ಬರುತ್ತಿದ್ದೇನೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.ಇದರಿಂದ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಡಿ ಪ್ರಕರಣ ಈಗ ಹೊಸ ತಿರುವು ಪಡೆದಂತಾಗಿದೆ. ಮಾರ್ಚ್ 2ರಂದು ರಾಸಲೀಲೆಯ ಸಿಡಿ ಬಹಿರಂಗವಾದ ಬಳಿಕ ರಾಜಕೀಯವಾಗಿ ಅಲ್ಲೋಲ ಕಲ್ಲೋಲವೇ ಸೃಷ್ಟಿಸಿತ್ತು.

ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯುವತಿ ಒಂದಷ್ಟು ದಿನ ಅಜ್ಞಾತ ಸ್ಥಳದಲ್ಲಿದ್ದರು. ಈ ನಡುವೆ ಕಾಂಗ್ರೆಸ್‍ನ ಕೆಲವು ನಾಯಕರ ಮೇಲೆ ಆರೋಪಗಳು ಕೇಳಿಬಂದಿದ್ದವು. ಹನಿಟ್ರ್ಯಾಪ್ ಆಗಿದೆ. ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡಲಾಗಿದೆ ಎಂಬೆಲ್ಲಾ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು.

ಸರ್ಕಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ ರಚಿಸಿತು. ಅಜ್ಞಾತ ಸ್ಥಳದಲ್ಲಿದ್ದಾಗ ಯುವತಿ ವಿಡಿಯೋ ಸಂದೇಶದ ಮೂಲಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರದ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಮೇಶ್ ಜಾರಕಿಹೊಳಿ ಅವರ ವಿರುದ್ಧ ಆರೋಪದ ವಿಚಾರದಲ್ಲಿ ದೃಢವಾಗಿ ನಿಂತಿದ್ದರು.

ನ್ಯಾಯಾೀಶರ ಮುಂದೆ ಹಾಜರಾಗಿ ಸಿಆರ್‍ಪಿಸಿ 164 ಅಡಿ ಹೇಳಿಕೆಯನ್ನೂ ದಾಖಲಿಸಿದ್ದರು. ಅದರ ನಂತರ ರಮೇಶ್ ಜಾರಕಿಹೊಳಿ ಅವರನ್ನು ಬಂಸಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದವು.

ಈ ನಡುವೆ ಯುವತಿಯ ಪೋಷಕರು ತಮ್ಮ ಮಗಳು ಒತ್ತಡದಲ್ಲಿ ನೀಡಿರುವ ಹೇಳಿಕೆಯನ್ನು ಪರಿಗಣಿಸಬಾರದು. ಆಕೆಗೆ ಒಂದೆರಡು ದಿನ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಸತತವಾಗಿ ಆರು ದಿನಗಳ ಕಾಲ ಯುವತಿ ವಿಚಾರಣೆ ನಡೆದಿತ್ತು. ಇವೆಲ್ಲದರ ಬಳಿಕ ಯುಗಾದಿಯ ಮುನ್ನಾ ದಿನವಾದ ಇಂದು ಯುವತಿ ಖುದ್ದಾಗಿ ತನಿಖಾಧಿಕಾರಿಗಳಿಗೆ ಕರೆ ಮಾಡಿದ್ದು, ತಾನು ಹೇಳಿಕೆ ನೀಡಬೇಕಿದೆ ಎಂದು ತಿಳಿಸಿರುವುದು ಕುತೂಹಲ ಕೆರಳಿಸಿದೆ.

ಯುವತಿ ತಾನಾಗೇ ಕರೆ ಮಾಡಿ ಬಂದಿರುವುದರಿಂದ ಬಹುಶಃ ವ್ಯತಿರಿಕ್ತ ಹೇಳಿಕೆ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಈ ಹಂತದಲ್ಲಿ ಈ ಮೊದಲಿನ ಹೇಳಿಕೆಯನ್ನು ಅಲ್ಲಗಳೆದು ಯುವತಿ ಹೊಸದಾಗಿ ಹೇಳಿಕೆ ನೀಡಿದರೆ ಪ್ರಕರಣ ಸಂಪೂರ್ಣ ತಿರುವುಮುರುವು ಆಗಲಿದೆ.

ಮತ್ತೊಮ್ಮೆ ನ್ಯಾಯಾೀಶರ ಮುಂದೆ ಹೊಸದಾಗಿ ತನಿಖೆ ದಾಖಲಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಯಾವ ಹೊಸ ತಿರುವುಗಳು ಎದುರಾಗಲಿವೆಯೋ ಎಂಬ ಕುತೂಹಲಗಳು ಹೆಚ್ಚಾಗಿವೆ.

Facebook Comments

Sri Raghav

Admin